
ಕಲಬುರಗಿ;ಮೇ.8: ವಿದ್ಯಾರ್ಥಿಗಳು ತಮ್ಮ ಜೀವನದ ಬೆಳವಣಿಗೆಯ ಹಂತದಲ್ಲಿ ಮಾದಕ ದ್ರವ್ಯಗಳು ಮತ್ತು ಇತರ ಕೆಟ್ಟ ಅಭ್ಯಾಸಗಳ ಆಮಿಷಕ್ಕೆ ಬಲಿಯಾಗಬಾರದು ಮತ್ತು ಒತ್ತಡದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಜೊತೆಗೆ ಮೊಬೈಲ್ ನೋಡುವ ಸಮಯವನ್ನು ಕಡಿಮೆ ಮಾಡಬೇಕು ಎಂದು ಖ್ಯಾತ ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ್ ತಿಳಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ. ಸಿ. ಆರ್. ಚಂದ್ರಶೇಖರ್, ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ, ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವುದರಿಂದ, ತನ್ನ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಒಟ್ಟು 142 ಕೋಟಿ ಜನಸಂಖ್ಯೆಯಲ್ಲಿ ಸರಿ ಸುಮಾರು 45 ಕೋಟಿ ಯುವಕರಿದ್ದಾರೆ ಮತ್ತು ಈ ನಮ್ಮ ಅಗಾಧ ಶಕ್ತಿಯನ್ನು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿ ಸಲಹಾ ಸಮಿತಿ ಮತ್ತು ರ್ಯಾಗಿಂಗ್ ವಿರೋಧಿ ಸಮಿತಿ ಜಂಟಿಯಾಗಿ ಆಯೋಜಿಸಿದ್ದ “ಮಾನಸಿಕ ಆರೋಗ್ಯ, ಯೋಗಕ್ಷೇಮ ಮತ್ತು ರ್ಯಾಗಿಂಗ್ ಮುಕ್ತ ಕ್ಯಾಂಪಸ್” ಶೀರ್ಷಿಕೆಯ ಕುರಿತು ಮಾತನಾಡಿದ ಡಾ. ಚಂದ್ರಶೇಖರ್, ದೇಶದ ಯುವಕರನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವುದು ಮತ್ತು ಸಮಾಜದ ದುಷ್ಕೃತ್ಯಗಳಿಗೆ ಬಲಿಯಾಗದಂತೆ ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಯುವಕರು ತಮ್ಮ ಬೆಳವಣಿಗೆಯ ವರ್ಷಗಳಲ್ಲಿ ಜಾಗರೂಕರಾಗಿರಬೇಕು, ಜೀವನದಲ್ಲಿ ಸಾಧಿಸಬಹುದಾದ ಗುರಿಯನ್ನು ನಿಗದಿಪಡಿಸಬೇಕು, ಈ ಗುರಿಯನ್ನು ಸಾಧಿಸಲು ಅವಿಶ್ರಾಂತವಾಗಿ ಶ್ರಮಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಇತ್ತೀಚಿನ ದಿನಗಳಲ್ಲಿ ಹೊರಹೊಮ್ಮುತ್ತಿರುವ ಆತಂಕಕಾರಿ ಸಂಗತಿಯೆಂದರೆ ಸುಲಭವಾಗಿ ಹಣ ಗಳಿಸಲು ಸೈಬರ್ ಅಪರಾಧದಂತಹ ಚಟುವಟಿಕೆಗಳಲ್ಲಿ ಯುವಕರು ಭಾಗಿಯಾಗುತ್ತಿರುವುದು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮಾದಕ ದ್ರವ್ಯಗಳು ಮತ್ತು ಇತರ ಹಾನಿಕಾರಕ ಅಭ್ಯಾಸಗಳಿಗೆ ಬಲಿಯಾಗದಂತೆ ಪೆÇೀಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಜೀವನದಲ್ಲಿ ಸರಿಯಾದ ಹಾದಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಜೀವನದಲ್ಲಿ ದಾರಿ ತಪ್ಪಿದ ವಿದ್ಯಾರ್ಥಿಗಳಿಗೆ ಸಮಯೋಚಿತ ಸಮಾಲೋಚನೆ ನಡೆಸಿ ಅವರನ್ನು ಮತ್ತೆ ಸರಿ ದಾರಿಗೆ ತರಬೇಕು ಎಂದರು.
ಪದವೀಧರರಲ್ಲಿ ದೊಡ್ಡ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಅವಶ್ಯಕತೆಯಿದೆ ಎಂದು ಡಾ. ಚಂದ್ರಶೇಖರ್ ಹೇಳಿದರು. “ದೇಶದಲ್ಲಿ ಶೇಕಡಾ 30ರಷ್ಟು ಯುವಕರು ಪದವೀಧರರಾಗಿದ್ದಾರೆ ಎಂದು ಹೆಮ್ಮೆಪಡಬೇಕಾದರೂ, ಅμÉ್ಟೀ ಕಳವಳಕಾರಿ ಸಂಗತಿಯೆಂದರೆ, ಈ ಪದವೀಧರರಲ್ಲಿ ಶೇಕಡಾ 40ರಷ್ಟು ವಿದ್ಯಾರ್ಥಿಗಳು ವಿಶೇಷವಾಗಿ ಇಂಜಿನಿಯರಿಂಗ್ ಪದವೀಧರರು, ನಿರುದ್ಯೋಗಿಗಳಾಗಿದ್ದಾರೆ”. ಪದವೀಧರರು ಮಾಡುತ್ತಿರುವ ಉದ್ಯೋಗಗಳು ಮತ್ತು ಅವರ ಅರ್ಹತೆಗಳ ನಡುವೆ ಹೊಂದಾಣಿಕೆಯೇ ಇಲ್ಲ. ಇಂಜಿನಿಯರಿಂಗ್ ಪದವೀಧರರು ಮತ್ತು ಎಂಬಿಬಿಎಸ್ ಪದವೀಧರರು ತಮ್ಮ ಅರ್ಹತೆಗಿಂತ ಕಡಿಮೆ ಇತರ ವೃತ್ತಿಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ನಿದರ್ಶನಗಳಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, ಡಾ. ಚಂದ್ರಶೇಖರ್ ಅವರು ಮೊಬೈಲ್‍ಗಳಿಂದ ದೂರವಿರಬೇಕು ಮತ್ತು ದುರದೃಷ್ಟವಶಾತ್ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮೊಬೈಲ್ ವ್ಯಸನಿಗಳಾಗಿದ್ದಾರೆ ಮತ್ತು ಮೊಬೈಲ್ ಪರದೆಯ ಮೇಲೆ ಹೆಚ್ಚಿನ ಸಮಯ ಕಳೆಯುವುದರಿಂದ ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದರು.
ಶರಣಬಸವ ವಿಶ್ವವಿದ್ಯಾಲಯದ ನಿರ್ದೇಶಕ ಪೆÇ್ರ. ವಿ. ಡಿ. ಮೈತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ್ತ ವಿದ್ಯಾರ್ಥಿ ಸಮಾಲೋಚನಾ ಸಮಿತಿಯ ಅಧ್ಯಕ್ಷ ಡಾ. ಶರಣ ಶೇಗೇದಾರ ಸ್ವಾಗತಿಸಿದರು.






















