
ಧಾರವಾಡದಲ್ಲಿ ಮಾಜಿ ಮಹಾಪೌರರಾದ ಹಾಗೂ ಈರೇಶ ಅಂಚಟಗೇರಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಪೌರಕಾರ್ಮಿಕರ ಜೊತೆಗೂಡಿ ಸಂಭ್ರಮದಿAದ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆರತಿ ಬೆಳಗಿ, ಸಿಹಿ ತಿನಿಸಿ, ದೀಪಾವಳಿ ಉಡುಗೊರೆಗಳನ್ನು ನೀಡಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಮಾತನಾಡಿದ “ದೀಪಾವಳಿ ಎಂದರೆ ಕೇವಲ ಮನೆ-ಮನೆಯಲ್ಲಿ ದೀಪ ಬೆಳಗಿಸುವ ಹಬ್ಬವಲ್ಲ; ನಮ್ಮ ಮನಸ್ಸಿನ ಕತ್ತಲೆಯನ್ನು ದೂರ ಮಾಡಿ, ಪ್ರೀತಿ, ವಿಶ್ವಾಸ, ಮಾನವೀಯತೆ ಮತ್ತು ಸಹಬಾಳ್ವೆಯ ಬೆಳಕನ್ನು ಎಲ್ಲೆಡೆ ಪಸರಿಸುವ ಹಬ್ಬವಾಗಿದೆ ಎಂದರು.























