Home ಜಿಲ್ಲೆ ಕಲಬುರಗಿ ಕಾರ್ಖಾನೆಯಲ್ಲಿ ಯಂತ್ರ ಸಿಡಿದು ಕಾರ್ಮಿಕ ಸಾವು

ಕಾರ್ಖಾನೆಯಲ್ಲಿ ಯಂತ್ರ ಸಿಡಿದು ಕಾರ್ಮಿಕ ಸಾವು

ಕಲಬುರಗಿ.ನ.4- ಜಿಲ್ಲೆಯ ಚಿಂಚೋಳಿ ತಾಲೂಕಿನ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯಲ್ಲಿ ಯಂತ್ರೋಪಕರಣ ಸಿಡಿದು ಬಡಿದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಿಹಾರ ಮೂಲದ ಅಜಿತ್ ಕುಮಾರ್ (32) ಮೃತಪಟ್ಟ ಕಾರ್ಮಿಕ. ಉದ್ಯೋಗ ಅರಸಿ ಬಿಹಾರದಿಂದ ಚಿಂಚೋಳಿಗೆ ಬಂದಿದ್ದ ಅಜಿತ್ ಕುಮಾರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಸಿಮೆಂಟ್ ಕಂಪನಿಯ ಮಿಲ್‍ನಲ್ಲಿ ಕಪ್ಲಿಂಗ್ ಒಡೆದ ಪರಿಣಾಮ ಯಂತ್ರೋಪಕರಣಗಳು ಸಿಡಿದು ಕಾರ್ಮಿಕರಿಗೆ ಬಡಿದಿವೆ.ಘಟನೆಯಲ್ಲಿ ಮಹಿಪಾಲರೆಡ್ಡಿ ಹಾಗೂ ಮನುಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಿರಿಯಾಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.