Home ಜಿಲ್ಲೆ ಕಲಬುರಗಿ 10 ಕ್ವಿಂಟಲ್ ಜೋಳ ಜಪ್ತಿ

10 ಕ್ವಿಂಟಲ್ ಜೋಳ ಜಪ್ತಿ

ಕಲಬುರಗಿ,ನ.4-ಶಹಾಬಾದ ರಿಂಗ್ ರಸ್ತೆಯಲ್ಲಿ ಸಾರ್ವಜನಿಕ ಪಡಿತರ ಚೀಟಿ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸುವ ಜೋಳವನ್ನು ವಾಹನ ಒಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಆಹಾರ ನಿರೀಕ್ಷಕರಾದ ಅರ್ಚನಾ ಕಟ್ಟಿಮನಿ ಅವರು ದಾಳಿ ನಡೆಸಿ 33 ಸಾವಿರ ರೂಪಾಯಿ ಮೌಲ್ಯದ 10 ಕ್ವಿಂಟಲ್ ಜೋಳ ಜಪ್ತಿ ಮಾಡಿದ್ದಾರೆ.
ವಾಹನ ಚಾಲಕ ಚಿತ್ತಾಪುರ ಪಟ್ಟಣದ ಶಹಾಬಾದ ರಸ್ತೆಯ ಬಿಲಾಲ್ ಕಾಲೋನಿಯ ಚಿತಾವಲಿ ತಂದೆ ಅಬ್ದುಲ್ ರಜಾಕ್ ಮುಲ್ಲಾ ಎಂಬಾತನ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆದಿದೆ.