Home Uncategorized ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹ

ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹ

ಸೈದಾಪುರ:ತಮ್ಮ ಜಮೀನಿನ ಕೃಷಿ ಕೆಲಸ ಮುಗಿಸಿಕೊಂಡು ವಾಹನದಲ್ಲಿ ಮನೆಗೆ ಮರಳುತ್ತಿದ್ದ ಒಂದೇ ಕುಟುಂಬದ ಬಸವಲಿಂಗಮ್ಮ, ತಿಮ್ಮಣ್ಣ, ನಾಗಮ್ಮ ಇವರುಗಳಿಗೆ ವೇಗವಾಗಿ ಬಂದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದ ರಬಸದ ಪರಿಣಾಮ ತಾಯಿ, ಮಗ ಹಾಗೂ ಸೊಸೆ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸೈದಾಪುರ ಹೊರವಲಯದ ೧೫೦ ರಾಷ್ಟ್ರೀಯ ಹೆದ್ದಾರಿಯ ಕರಿಬೆಟ್ಟ ಕ್ರಾಸ್ ಸಮೀಪ ಸಂಭವಿಸಿದೆ. ಮೃತರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದ್ದಾರೆ.
ಮೃತರ ಮನೆಗೆ ತೆರಳಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿದರು. ಅಪಘಾತಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬAಧಪಟ್ಟ ಅಧಿಕಾರಿಗಳು ಇನ್ನಾದರೂ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕಿದೆ. ಕರಿಬೆಟ್ಟ ಕ್ರಾಸ್ ಸೇರಿದಂತೆ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ವೇಗ ನಿಯಂತ್ರಣ, ಎಚ್ಚರಿಕೆ ಫಲಕ, ಸೂಕ್ತ ರಸ್ತೆ ಸುರಕ್ಷತಾ ವ್ಯವಸ್ಥೆ ಹಾಗೂ ಅಗತ್ಯವಿದ್ದಲ್ಲಿ ವೈಜ್ಞಾನಿಕ ರಸ್ತೆ ಸುಧಾರಣೆ ಕೈಗೊಳ್ಳಬೇಕು. ಪ್ರತಿಬಾರಿಯೂ ಅಪಘಾತವಾದ ನಂತರ ಸಂತಾಪ ಸೂಚಿಸುವುದಕ್ಕಿಂತ, ಮತ್ತೊಂದು ಜೀವ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಮೇಶ ಭೀಮನಹಳ್ಳಿ, ಮಲ್ಲೇಶಿ, ಪವ£,À ಶರಣಪ್ಪ ಬಾಗಲಿ, ಹಣಮಂತ ವಡವಟ ಶ್ರೀಶೈಲ್ ಬಾಗಲಿ, ಸಾಬಣ್ಣ ಆನಂಪಲ್ಲಿ, ಆದೇಪ್ಪ ಮುನಗಲ್, ವಿಶ್ವನಾಥ ಘಂಟಿ, ಸಾಯಪ್ಪ ಚಿಗರಿ, ದಶರಥ ಕಡೆಚೂರು, ಸಾಬಮ್ಮ ಕಣೇಕ¯,ï ಮಲ್ಲಮ್ಮ ಆನಂಪಲಿ,್ಲ ಆಂಜನೇಯ ಕಟ್ಟಿಮನಿ, ಯಶ್ವಂತ ಕಾಳೆಬೆಳಗುಂದಿ, ಅಂಬ್ರೇಶ ಸೈದಾಪೂರ, ದೇವು ಚಿಗರಿ, ಆಶಪ್ಪ ಪಸಪೂಲ್, ಹಣಮಂತ ಪೂಜಾರಿ, ಸಾಬಣ್ಣ ಜೇಗರ, ರಮೇಶ ಶರಣಪ್ಪ, ಮಲ್ಕಪ್ಪ, ಸಾಬಣ್ಣ, ರೆಡ್ಡಿ, ತಿಮ್ಮಣ್ಣ, ರಮೇಶ, ಮಲ್ಲಿಕಾರ್ಜುನ, ಹಣಮಂತ ಸೇರಿದಂತೆ ಇತರರಿದ್ದರು.