Home ಜಿಲ್ಲೆ ತುಮಕೂರು ಅದ್ದೂರಿ ಮುಳಕಟ್ಟಮ್ಮದೇವಿ ಜಾತ್ರಾ ಮಹೋತ್ಸವ

ಅದ್ದೂರಿ ಮುಳಕಟ್ಟಮ್ಮದೇವಿ ಜಾತ್ರಾ ಮಹೋತ್ಸವ

ಚೇಳೂರು, ನ. ೨- ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಅಧಿದೇವತೆಯಾದ ಶ್ರೀ ಮುಳ್ಕಟ್ಟಮ್ಮ ದೇವಿಯ ೪೮ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬೇವಿನ ವೃಕ್ಷ ಹಾಗೂ ಅರಳಿ ವೃಕ್ಷಕ್ಕೆ ಕಲ್ಯಾಣೋತ್ಸವ ಹಾಗೂ ಮರಿಯಮ್ಮ ಮಾರಮ್ಮ ದೇವಿಯ ಬೆಳ್ಳಿ ರಥದಲ್ಲಿ ಮೆರವಣಿಗೆ ಏರ್ಪಡಿಸಲಾಗಿತ್ತು.


ದಲಿತ ಮುಖಂಡ ನಿಟ್ಟೂರು ರಂಗಸ್ವಾಮಿ ಜಾತ್ರಾ ಮಹೋತ್ಸವ ಕುರಿತು ಮಾತನಾಡಿ, ಸುಮಾರು ೪೮ ವರ್ಷಗಳಿಂದ ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀ ಮುಳಕಟ್ಟಮ್ಮ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದು ಅನೇಕ ಕಲಾತಂಡಗಳೊಂದಿಗೆ ನಿಟ್ಟೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮುಳಕಟ್ಟಮ್ಮ ಮಾರಮ್ಮ ಹಾಗೂ ಮರಿಯಮ್ಮ ದೇವರುಗಳ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಣ್ಣ, ನಿಟ್ಟೂರಯ್ಯ, ಪ್ರದೀಪ್, ಕೃಷ್ಣಯ್ಯ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಮಹಿಳೆಯರು ಭಾಗವಹಿಸಿದ್ದರು.