
ಕಲಬುರಗಿ/ಜೇವರ್ಗಿ,ಅ.26-ರಾಜ್ಯ ಸಕ್ರಾದ ಸಮ್ಣ ನೀರಾವರಿ, ವಿಜ್ಞಾನ, ತಂತ್ರಜ್ಞಾನ ಸಚಿವರಾಗಿರುವ ಡಾ.ಅಜಯ್ ಸಿಂಗ್ ಅವರು 2 ದಿನ ಕಲಬುರಗಿ ಹಾಗೂ ಜೇವರ್ಗಿಲ್ಲಿ ಸಂಚರಿಸಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.
ಬರಗಾಲ ಪೀಡಿತವಾಗಿರುವ ಈ ಸಂದರ್ಬದಲ್ಲಿ ರೈತರು ಅನೇಕರು ಸಚಿವರನ್ನು ಕಂಡು ಬೇಗ ಪರಿಹಾರ ಕೊಡಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಕೊತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನತೆ ಸಚಿವರ ಗಮನಕ್ಕೆ ತಂದರು. ತಕ್ಷಣವೇ ಜೇವರ್ಗಿ, ಕಲಬುರಗಿ ಅಧಿಕಾರಗಳನ್ನು ಕರೆ ಮಾಡಿ ಸಚಿವರು ಸೂಕ್ತ ಪರಿಹಾರೋಪಾಯಗಳಿಗೆ ಸೂಚಿಸಿದರು.
ಜೇವರ್ಗಿ ತಾಲೂಕಿನ ಮಂದೇವಾಲ ಹಾಗೂ ಸೊನ್ನ ಗ್ರಾಮಕ್ಕೆ ಭೇಟಿ ನೀಡಿ ತೆರಳುವಾಗ ವಿವಿಧ ಗ್ರಾಮದ ಮುಖಂಡರು , ರೈತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸಚಿವರಾದ ಡಾ. ಅಜಯ್ ಸಿಂಗ್ ಸೂಚನೆ ನೀಡಿದರು.
ಇನ್ನು ಕಲಬುರಗಿಯ ತಮ್ಮ ನಿವಾಸದಲ್ಲಿ ಸಚಿವರಾದ ಡಾ. ಅಜಯ್ ಸಿಂಗ್ ಅವರು ಹಿರಿಯ ಮುಖಂಡರು ಹಾಗೂ ಸಾರ್ವಜನಿಕರಿಗೆ ಭೇಟಿಯಾಗಿ ಕುಂದುಕೊರತೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಅಹವಾಲುಗಳ ಮನವಿ ಪತ್ರದ ಜೊತೆಗೇ ಬನ್ನಿ ಕೊಟ್ಟು ಸಚಿವರಿಗೆ ಶುಭ ಕೋರಿದರು.
ತದನಂತರ ವಿವಿಧ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಮುಖಂಡರು ಹಾಗೂ ಪಕ್ಷದ ಹಿರಿಯ ಮುಖಂಡರೊಂದಿಗೆ ಹಲವು ಪ್ರಮುಖ ವಿಷಯಗಳ ಕುರಿತು ಸಚಿವ ಡಾ. ಅಜಯ್ ಸಿಂಗ್ ಅವರು ಚರ್ಚಿಸಿದರು.























