Home ಜಿಲ್ಲೆ ಕಲಬುರಗಿ ಡಾ.ನಾಗಲಕ್ಷ್ಮೀ ಚೌಧರಿ ಅವರನ್ನು ಭೇಟಿಯಾದ ನವ ಕರ್ನಾಟಕ ಸಂಗೀತ ಪಧವೀಧರರ ನಿಯೋಗ

ಡಾ.ನಾಗಲಕ್ಷ್ಮೀ ಚೌಧರಿ ಅವರನ್ನು ಭೇಟಿಯಾದ ನವ ಕರ್ನಾಟಕ ಸಂಗೀತ ಪಧವೀಧರರ ನಿಯೋಗ

ಕಲಬುರಗಿ,ಅ.26-ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರನ್ನು ನವ ಕರ್ನಾಟಕ ಸಂಗೀತ ಪಧವೀಧರರ ಸಂಘದ ನಿಯೋಗ ಭೇಟಿ ಮಾಡಿ, ಕಲಾವಿದ ಬಗ್ಗೆ ಹಾಗೂ ಸಂಗೀತ ಪಧವೀಧರರ ಸಂಗೀತ ಶಿಕ್ಷಕರ ನೇಮಕಾತಿ ಮಾಡುವ ಕುರಿತು ಮಾಹಿತಿ ನೀಡಿ ಅದರ ಕುರಿತು ಚರ್ಚೆ ಮಾಡಲಾಯಿತು.
ಸಂಗೀತದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಕುರಿತು ಮಾತನಾಡಿದ ಅವರು ಇದರ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ರಾಜ್ಯ ಅಧ್ಯಕ್ಷರಾದ ಬಂಡಯ್ಯ ಸ್ವಾಮಿ ಸುಂಟನೂರ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಸಂಗೀತ ಪಧವೀಧರರಾದ ತೋಟಯ್ಯ ಅಬ್ಬೇತುಮಕೂರ, ಶಂಭುಲಿಂಗಯ್ಯ ಗೊಬ್ಬುರ್, ಸಂಗಮೇಶ ಸ್ವಂತ, ಅನಿಲ ಭೀಮಳ್ಳಿ , ಶರಣಪ್ಪ ಹಾವನೂರ, ಬಸವರಾಜ ಜೇರಟಗೀ ಅನೇಕರು ಇದ್ದರು