
ಕಲಬುರಗಿ,ಅ.26-ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರ ಕೊಠಡಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ.ರೂಕೀಯ ಆಸ್ನಾ ರಬಾ ಅವರು ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಓ ಬಿ ಜಿ. ಮುಖ್ಯಸ್ಥರು ಹಾಗೂ ಎಂ ಸಿ ಎಚ್ ವೈದ್ಯಕೀಯ ಅಧೀಕ್ಷಕರಾದ ಡಾ.ಉಷಾ ಎಸ್ ದೊಡ್ಡಮನಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ.ಓಂ ಪ್ರಕಾಶ್ ಅಂಬೂರೆ, ಡಾ.ಜಯಮ್ಮ ಎಸ್ ಗಣಜಲ್ ಖೇಡ್, ಗಣಕ ಯಂತ್ರ ಸಹಾಯಕಿ ಪಾರ್ವತಿ ಭೀಮರಾವ್, ಅವಿನಾಶ್ ಪಾಟೀಲ, ಶರಣು, ಪೃಥ್ವಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.























