
ಬೀದರ:ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಪಾಟ್ನಾದಲ್ಲಿ ಅವರ ಪಕ್ಷದ ಸಭೆಯಲ್ಲಿ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರ ತಂದೆಯ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಖಂಡಿಸಿದ್ದಾರೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಿಗಳಿಗೆ ನಿಂದಿಸಿರುವುದು, ದೇಶದ ಜನತೆಗೆ ಮಾಡಿರುವ ಅವಮಾನವಾಗಿದೆ, ಕೂಡಲೆ ಅವರು ದೇಶದ ಜನತೆಗೆ ಮತ್ತು ಪ್ರಧಾನಿಗಳಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೇಯವರು ಹಿರಿಯರಾಗಿ, ಹತಾಷಾ ಭಾವನೆಯಿಂದ ಇಂತಹ ನೀಚ ಹೇಳಿಕೆಗಳು ನೀಡುವುದರ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದು ಸರಿಯಲ್ಲಾ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲಿಂದ ಮೇಲೆ ಹೊರದೇಶಕ್ಕೆ ಪ್ರಯಾಣಿಸುತಾ, ಒಬ್ಬ ಗಂಭೀರತೆ ಇಲ್ಲದ ನಾಯಕ ಆಗಿದ್ದಾರೆ ಮತ್ತು ಮುಂದೆಯೂ ಪ್ರಧಾನಿಯಾಗಿ ನರೇಂದ್ರ ಮೋದಿಯವರೆ ಮುಂದುವರೆಯಲಿದ್ದಾರೆ ಎಂದು ಕಾಂಗ್ರೇಸ್ ಪಕ್ಷದ ಸಭೆಯಲ್ಲಿಯೆ ಕಾಂಗ್ರೇಸ್ ಕಾರ್ಯಕರ್ತ ತನ್ನ ಮನದಾಳದ ಮಾತು ಹೇಳಿದ್ದಾರೆ, ಇದರಿಂದ ಅವಮಾನಿತರಾದ ಖರ್ಗೆಯವರು ಅಸಹನೆಯಿಂದ ಇಂತಹ ನೀಚ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲಾ ಎಂದು ಖೂಬಾ ಆಕ್ರೋಷ ಹೊರಹಾಕಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿದ್ದು, ಇಂತಹ ನಿಂದನೆಗಳ ಮೂಲಕ, ಅವರ ಪಕ್ಷದವರಿಗೆ ಮತ್ತು ದೇಶದ್ರೊಹಿಗಳ ಜೊತೆ ನಿಲ್ಲುತ್ತಿರುವ ಕೆಲವು ಸಂಘಟನೆಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿರುವಂತಿದೆ ಎಂದಿದ್ದಾರೆ, ಆದರೆ ಇಂತಹ ಹೇಳಿಕೆಗಳಿಂದ ಖರ್ಗೆಯವರು ಏನು ಸಾಧಿಸುವುದಿಲ್ಲಾ, ಹೊರತಾಗಿ ಸಮಾಜದ ಕಣ್ಣಲ್ಲಿ ಇನ್ನಷ್ಟು ಕೆಳಗೆ ಬಿಳಲಿದ್ದಾರೆ, ಖರ್ಗೇಯವರು ತನ್ನ ಇದೆ ಚಾಳಿ ಮುಂದುವರೆಸಿದರೆ ಭವಿಷ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರದು ಎಂದು ತಿಳಿಸಿದ್ದಾರೆ.
ಮೇಲಿಂದ ಮೇಲೆ ಕಾಂಗ್ರೇಸ್ ಪಕ್ಷದ ನಾಯಕರುಗಳು ಇಂತಹ ತುಚ್ಯ ಹೇಳಿಕೆ ನೀಡುವ ಮೂಲಕ ಮತ್ತು ಸಮರ್ಥಿಸಿಕೊಳ್ಳುವ ಮೂಲಕ ಅವರ ಕಾಂಗ್ರೇಸ್ ಪಕ್ಷದ ಸಂಸ್ಕøತಿ, ಸಂಸ್ಕಾರ ಮತ್ತು ದೇಶದ ಬಗ್ಗೆ, ದೇಶದ ಪ್ರಧಾನಿಗಳ ಬಗ್ಗೆ ಅವರಿಗಿರುವ ವಿಷಕಾರಿ ಮನೋಭಾವನೆ ಜನರ ಮುಂದೆ ಹೊರಹಾಕುತ್ತಿದ್ದಾರೆ, ಇಂತಹದರಿಂದ ಮೋದಿಜೀಯವರಿಗೆ ಕುಂದುಸಲಿಕೆ ಮತ್ತು ದೇಶದ ಬಲಿಷ್ಠ ಅಭಿವೃದ್ದಿ ಸಂಕಲ್ಪದಿಂದ ಹಿಂದೆ ಸರಿಸಲಿಕೆ ಸಾಧ್ಯವಿಲ್ಲಾ ಮತ್ತು ಕಾಂಗ್ರೇಸ್ನವರ ಇಂತಹ ಕೆಟ್ಟ ಕರ್ಮಗಳಿಂದಲೆ ದೇಶದಲ್ಲಿ ಕಾಂಗ್ರೇಸ್ ಪಕ್ಷ ದುಸ್ಥಿತಿಗೆ ಬರಲು ಕಾರಣವಾಗಿದೆ ಎಂದು ಭಗವಂತ ಖೂಬಾ ಆಕ್ರೋಷ ವ್ಯಕ್ತಪಡಿಸಿದ್ದಾರೆ.























