
ಚನ್ನಮ್ಮನ ಕಿತ್ತೂರು,ಸೆ.೧೭: ಶಿಕ್ಷಕ ಈರಣ್ಣಾ ನಂದಿಹಳ್ಳಿ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ, ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವುದರ ಮೂಲಕ “ರಾಜೀವ ಗಾಂಧಿ”ü ರಾಜ್ಯಮಟ್ಟದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಹೇಳಿದರು.
ತಾಲೂಕಿನ ಬೈಲೂರ ಗ್ರಾಮದಲ್ಲಿ ಕಸಾಪ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಕ್ಷಕ ನಂದಿಹಳ್ಳಿಯವರ ಅಭಿನಂದನಾ ಸಮಾರಂಭದಲ್ಲಿ ಸತ್ಕರಿಸಿ ಮಾತನಾಡಿದರು. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕ್ಷೇತ್ರದ ಎಲ್ಲ ಶಿಕ್ಷಕ ಸಮುದಾಯಕ್ಕೆ ಸಂದ ಗೌರವ ಎಂದರು.
ಎಸ್‌ಬಿಎA ಸರ್ಕಾರಿ ಬಾಲಕಿ ಪ್ರೌಢಶಾಲೆ ಉಪ ಪ್ರಾಶುಂಪಾಲ ಮಹೇಶ ಚನ್ನಂಗಿ ಮಾತನಾಡಿ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ವೃತ್ತಿಯ ಘನತೆಯನ್ನು ಹೆಚ್ಚಿಸಿರುವ ಸೃಜನಶೀಲ ಶಿಕ್ಷಕ ನಂದಿಹಳ್ಳಿ ಜವಾಬ್ದಾರಿ ಇನ್ನಷ್ಟು ಇಮ್ಮಡಿಗೊಂಡಿತೆAದರು.
ಶಿಕ್ಷಕರುಗಳಾದ ಎಂ ಎಸ್ ಕಡಕೋಳ, ಮಂಜುನಾಥ ಕಳಸನ್ನವರ, ಬಸವರಾಜ ಬಿದರಿ, ಎಸ್.ಕೆ.ಕುರಗುಂದ, ಮಾತನಾಡಿದರು. ಪುಕೇಶಿ ಗಿರಿಯಾಲ, ಪ್ರಾರ್ಥಿಸಿ ಹಾಡಿದರು. ಕ್ಯೂರೇಟರ್ ರಾಘವೇಂದ್ರ ಸ್ವಾಗತಿಸಿದರು, ವಿವೇಕ ಕುರಗುಂದ ವಂದಿಸಿದರು, ನಾಗೇಶ ಬೆಣ್ಣಿ ನೀರೂಪಿಸಿದರು.
ಸಭೆಯಲ್ಲಿ ಮಲ್ಲಪ್ಪ ಕಡಕೋಳ, ಬಸವರಾಜ ದಳವಾಯಿ, ಗಂಗಾಧರ ಹನಮಸಾಗರ, ಸಂಗಮೇಶ ಹಿರೇಮಠ, ರವಿ ಅಗ್ನಿಹೊತ್ರಿ, ಶಂಕರಗೌಡ ಪಾಟೀಲ, ರಾಚಯ್ಯ ಕೆಂಜಡಿಮಠ, ಈರಪ್ಪ ಶಿಂದೋಳ್ಳಿ, ಜಗಧೀಶ ಅಂಗಡಿ, ಅನಿಲ ದೇಶಪಾಡೆ ಇತರರಿದ್ದರು.




























