Home ಜಿಲ್ಲೆ ಕಲಬುರಗಿ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ವತಿಯಿಂದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪ್ರದಾನ

ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ವತಿಯಿಂದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪ್ರದಾನ

ಕಲಬುರಗಿ.ಸೆ.17: ಹೆದ್ದಾರಿಗಳು, ಸೇತುವೆಗಳು, ಗಗನಚುಂಬಿ ಕಟ್ಟಡಗಳು ಅಣೆಕಟ್ಟುಗಳು ,ಹೈ ಸ್ಪೀಡ್ ಬುಲೆಟ್ ಟ್ರೈನ್ ಗಳು, ಕೈಗಾರಿಕಾ ಕ್ಷೇತ್ರ ,ನೀರಾವರಿ ಕ್ಷೇತ್ರ ,ಬಾಹ್ಯಾಕಾಶ ಕ್ಷೇತ್ರ ಗಳಲ್ಲಿ ದೇಶವು ಅಭಿವೃದ್ಧಿಯಾಗಬೇಕಾದರೆ ಅದರ ಹಿಂದಿನ ಪ್ರಮುಖ ಶಕ್ತಿ ನಮ್ಮ ಇಂಜಿನಿಯರ್ ಗಳು. ಇಂಜಿನಿಯರ್ಗಳು ದೇಶದ ಅಭಿವೃದ್ಧಿಯ ಹರಿಕಾರರು, ಎಂದು ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿಗಳಾದ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಿಣಿ ಎಸ್ ಅಪ್ಪ ಅವರು ಕೋರ್ಟ್ ರಸ್ತೆಯ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾದ 59ನೆಯ ಇಂಜಿನಿಯರ್ ದಿನಾಚರಣೆ ಮತ್ತು ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇಂಜಿನಿಯರ್ ಗಳು ಬರಿ ಅಭಿವೃದ್ಧಿಅಷ್ಟೇ ಮಾಡದೆ ಮುಂದಿನ ಪೀಳಿಗೆಯ ಮತ್ತು ಪರಿಸರ ರಕ್ಷಣೆ ಮತ್ತು ಸುಸ್ಥಿರ ವಾದಂತಹ ಸಂಶೋಧನೆಯನ್ನು ಮಾಡಬೇಕು ಎಂದರು. ಶುದ್ಧ ನೀರು, ಶುದ್ದ ಇಂಧನ, ಶುದ್ಧ ಪರಿಸರ, ಶುದ್ಧವಾದ ನಿರ್ಮಲವಾದ ಮಾಲಿನ್ಯ ರಹಿತ ಜೀವನವನ್ನು ಮುಂದಿನ ಪೀಳಿಗೆಗಾಗಿ ಇಡಬೇಕಾದದ್ದು ಕೂಡ ಇಂಜಿನಿಯರ್ ಗಳ ಕರ್ತವ್ಯ .ಈ ದಿನ ದೇಶ ಕಂಡ ಮಹಾನ್ ಅಭಿಯಂತರ ಸರ್ ಎಂ ವಿಶ್ವೇಶ್ವರಯ್ಯನವರ ಆದರ್ಶಗಳು ನಿಮಗೆಲ್ಲರಿಗೂ ದಾರಿದೀಪವಾಗಲಿ ಎಂದು ತಿಳಿಸಿದರು. ಹಿರಿಯ ಉದ್ಯಮಿ ಶ್ರೀ ವಿಷ್ಣುದಾಸ ತಪಾಡಿಯ ಮಾತನಾಡುತ್ತಾ ಮೂಲಸೌಕರ್ಯ ,ಕೈಗಾರಿಕಾ ಕ್ಷೇತ್ರ ಮತ್ತು ನಾವಿನ್ಯತೆಯಲ್ಲಿ ಇಂಜಿನಿಯರ್ ಬೆನ್ನೆಲುಬು ಎಂದರು. ಇನ್ನೊಬ್ಬ ಗೌರವ ಅತಿಥಿ ಗಳು ಮತ್ತು ಚೀಫ್ ಇಂಜಿನಿಯರರಾದ ಸುಭಾಷ್ ಶಿಕ್ಷಣಕರ್ ಮಾತನಾಡುತ್ತಾ ಭಾರತವು ಕೃಷಿ ಪ್ರಧಾನ ದೇಶ. ಆದ್ದರಿಂದ ಕೃಷಿ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಈ ಕ್ಷೇತ್ರದಲ್ಲಿ ನಮ್ಮ ಭಾರತವು ಸ್ವಾವಲಂಬನೆ ಸಾಧಿಸಿ ಅನ್ನದಾತ ರೈತರಿಗೆ ಸಹಾಯಕಾರಿ ಆಗುವಲ್ಲಿ ಇಂಜಿನಿಯರ್ ಅರು ಪ್ರಯತ್ನಿಸಬೇಕೆಂದು ವಿನಂತಿಸಿದರು. ಹೈದರಾಬಾದ್ ನ ಮೆಸ್ಪ್ರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದ ದೀಪಕ್ ದೀಕ್ಷಿತ್ ಅವರು ” ಇಂಜಿನಿಯರಿಂಗ್ ಎಕ್ಸಲೆನ್ಸ್ ಫಾರ್ ಎ ಸಸ್ಸ್ಟೇನಬಲ್ ಅಂಡ್ ಟೆಕ್ನಾಲಜಿಕಲಿ ಸೋuಟಿಜeಜಿiಟಿeಜವೇರಿನ್ ಇಂಡಿಯಾ” ಥೀಮ್ ವಿಷಯದ ಕುರಿತು ದಿಕ್ಸೂಚಿ ನುಡಿಯನ್ನು ನಡೆಯುತ್ತಾ ತ್ಯಾಜ್ಯ ವಸ್ತುಗಳನ್ನು ಹೇಗೆ ಮರುಪಯೋಗ ಮಾಡಿಕೊಂಡು ಕಸದಿಂದ ರಸ ಮಾಡಿ ಹೇಗೆ ಇಂಧನವನ್ನು ಉತ್ಪಾದಿಸಬಹುದೆಂದು ತಿಳಿಸಿದರು. ಡಾ. ಶ್ರೀಧರ್ ಪಾಂಡೆ ಅವರು ಅಧ್ಯಕ್ಷತೆ ವಹಿಸಿದರು. ವೇದಿಕೆ ಮೇಲೆ ಹಿರಿಯ ಸದಸ್ಯರಾದ ವಿ ಆರ್ ಮಾಲಿಪಾಟೀಲ್ ಜಗನ್ನಾಥ್ ಶೇಕ್ ಜಿ ಉಪಸ್ಥಿತರಿದ್ದರು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ ಗೌರವ ಕಾರ್ಯದರ್ಶಿಗಳಾದ ಶ್ರೀ ಉದಶಂಕರ್ ಬಳ್ಳಾರಿ ಅವರು ಸ್ವಾಗತಿಸಿದರು. ಡಾ .ವಿಶಾಲ ದತ್ತ ಕೊಹಿರವರು ಡಾ. ಚನ್ನಬಸಮ್ಮನವರು ನಿರೂಪಿಸಿದರು, ಡಾ .ಭಾರತಿ ಹರಸುರ, ಡಾ. ಶಶಿಧರ್ ಕಲ್ ಶೆಟ್ಟಿ, ರಾಜೇಂದ್ರ ಚಿಂಚೋಳಿ, ಡಾ. ರಾಜಶೇಖರ್ ಮಠಪತಿ ಅತಿಥಿ ಗಳನ್ನು ಪರಿಚಯಿಸಿದರು.
ಇದೇ ಸಮಾರಂಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಡಾ. ಅಮರೇಶ್ವರಿ ಎಸ್ ಪಾಟೀಲ್, ಡಾ. ಅಂಬರೀಶ್ ಪಿ ಅಂಬಲಗಿ, ಡಾ.ಬಾಬು ರಾವ್ ಎನ್ ಶೇರಿಕಾರ, ಆರ್ಕಿಟೆಕ್ಟ್ ಬಿ ಭರತ್ ಭೂಷಣ್, ಗೌರೆ ಹನುಮಂತರೆಡ್ಡಿ, ಶ್ರೀಮತಿ ಲಲಿತಾ, ಎಂ ಎಂ ಕರ್ಪೂರ್, ಮಹೇಶ್ ಎ ಚಂಗಟಾ, ಓಂ ಪ್ರಕಾಶ್ ಎಸ್ ಕರಣಗಿ, ಪದ್ಮಾವತಿ ಈ ಗುಂಡಗುರ್ತಿ, ಪಲ್ಲ ಸತ್ಯ ಶೀಲರೆಡ್ಡಿ, ಕಾಜಿ ಅಬ್ದುಲ್ ಮೋಹಿತ್, ರಮೇಶ್ ಧೂಳಪ್ಪ ಸಾಹು,ರಫಿಯುದ್ದೀನ್, ರಾಮಪ್ಪ ಹೆಚ್ ಕೊರವಾರ್, ಡಾ. ಸಂಗಮೇಶ, ಶಿವನಗೌಡ ಎಸ್ ಪಾಟೀಲ್, ಡಾ. ಸೌಮ್ಯ ಎಂ ಅಣಕಲ್( ಪೆದ್ದಿ), ಡಾ. ಸೈಯದ್ ಕಾಸಿಫ್ ಹುಸೇನ್, ವಾಸುದೇವ, ವಿಶ್ವನಾಥ್ ಚಿನ್ಮಳ್ಳಿ. 21 ಸಾಧಕ ಇಂಜಿನಿಯರ್ ಗಳಿಗೆ” ದಿ ಎಮನೆಂಟ್ ಇಂಜಿನಿಯರ್ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಡಾ. ಶರಣಬಸಪ್ಪ ಬಿ ಪಾಟೀಲ್ ರವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು
ಡಾ .ವಿಶಾಲ್ ದತ್ತ ಕೊಹಿರ್ ಸಂಚಾಲಕತ್ವದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆ ಚರ್ಚಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಲಕ್ಷ್ಮಿ ಮಾಕ ಮಲ್ಲಿಕಾರ್ಜುನ್ ದೇಶಮುಖ್ ಸೀತಾರಾಮ್ ಮುನ್ನೂರ್ ರಾಜು ಪತಂಗೆ ನಾಗೇಂದ್ರ ಸಿ ಬಿರಾದಾರ್ ರಾಜೇಂದ್ರ ಚಿಂಚೋಳಿ, ಡಾ. ರಾಜಶೇಖರ ಮಠಪತಿ, ಡಾ. ವಿಶಾಲ ದತ್ತ ಕೊಹ್ಹಿರ, ಡಾ. ಭಾರತಿ ಹರಸೂರ್, ಡಾ ಶರಣಬಸಪ್ಪ ಬಿ ಪಾಟೀಲ್ ಡಾ. ಶಶಿಧರ್ ಕಲ್ ಶೆಟ್ಟಿ, ಡಾ. ಅಮರೇಶ್ ಗಣಾಚಾರಿ, ರವೀಂದ್ರ ಕಡಗದ, ವಿ ಆರ್ ಮಾಲಿ ಪಾಟೀಲ್, ವಿಶ್ವನಾಥ್ ರೆಡ್ಡಿ ಬಸವರಾಜ್ ಪಾಟೀಲ್ ಉಪಸ್ಥಿತರಿದ್ದರು