
ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ದಂಡೋತಿ ಮತ್ತು ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದ್ದು, ಇದಕ್ಕೆ ಹೊಣೆಗಾರರಾದ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು, ಆಹಾರ ಗುಣಮಟ್ಟ ಅಧಿಕಾರಿಗಳು, ದವಸಧಾನ್ಯ ವಿತರಣಾ ಅಧಿಕಾರಿಗಳು ಮತ್ತು ಟೆಂಡರ್ ಪಡೆದಿರುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಮೃದ್ಧಿ ಕರ್ನಾಟಕ ಜನಪರ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಸಮಿತಿ ರಾಜ್ಯ ಅಧ್ಯಕ್ಷ ಸುಭಾಷ ಬಿದನೂರ, ಜಿಲ್ಲಾ ಅಧ್ಯಕ್ಷ ಗುರುಸ್ವಾಮಿ ಹಿರೇಮಠ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಹಾದೇವಿ ಹೆಳವಾರ, ಶಶಿಕಾಂತ ಡೆಂಗಿ, ಎಂ.ಡಿ.ನವಾಜ್, ಬಾಲಕೃಷ್ಣ ಪುಲೆ, ಉದಯಕುಮಾರ ಸಲಗರ, ರವಿ ಗೌಳಿ, ರಾಜೇಶ್ವರಿ, ಶ್ರೀನಾಥ, ರಾಹುಲ್ ಕಡೂನ್, ವಿನೋದ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




























