Home ಜಿಲ್ಲೆ ಕಲಬುರಗಿ ಸಿಯುಕೆಯ ಪ್ರಾಧ್ಯಾಪಕ ಡಾ.ರಾಘವೇಂದ್ರ ಬೋನಾಳ ಅವರು ಡಿಜಿಟಲ್ ಗ್ರಂಥಾಲಯ ಯೋಜನಾ ಸಲಹೆಗಾರರಾಗಿ ನೇಮಕ

ಸಿಯುಕೆಯ ಪ್ರಾಧ್ಯಾಪಕ ಡಾ.ರಾಘವೇಂದ್ರ ಬೋನಾಳ ಅವರು ಡಿಜಿಟಲ್ ಗ್ರಂಥಾಲಯ ಯೋಜನಾ ಸಲಹೆಗಾರರಾಗಿ ನೇಮಕ

ಕಲಬುರಗಿ,ಜು.22-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಘವೇಂದ್ರ ಬೋನಾಳ ಅವರು ಮಹಾರಾಷ್ಟ್ರದ ಪುಣೆ
ಮೂಲದ ಕ್ಯಾಲಿಯೋನಿಕ್ಸ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‍ನ ಡಿಜಿಟಲ್ ಗ್ರಂಥಾಲಯ, ಜ್ಞಾನ ನಿರ್ವಹಣೆ ಮತ್ತು ಮಾಹಿತಿ ವಿಜ್ಞಾನದ ಯೋಜನಾ ಸಲಹೆಗಾರರಾಗಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.
ವಿ.ವಿ.ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಪ್ರಾರಂಭವಾದಾಗಿನಿಂದ ಇದು ಮೊದಲ ಪ್ರಮುಖ ಸಲಹಾ ಯೋಜನೆಯಾಗಿದೆ. ಈ ಯೋಜನೆಯು ಸುಮಾರು 25 ಲಕ್ಷ ಮೌಲ್ಯದ ಅಂತರರಾಷ್ಟ್ರೀಯ ಆಫ್‍ಶೋರ್ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಯೋಜನೆಯನ್ನು ಒಳಗೊಂಡಿದೆ. ಈ ಸಲಹಾಯೋಜನೆಯು ನಮ್ಮ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನಾ ಪರಿಣಿತಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಲಭಿಸಿರುವುದು ಸಾಕ್ಷಿಯಾಗಿದೆ.
ಈ ಯೋಜನೆಯಡಿ ಡಾ. ಬೋನಾಳ ಅವರು ಡಿಜಿಟಲ್ ಗ್ರಂಥಾಲಯಗಳು, ಏಔಊಂ, ಆSಠಿಚಿಛಿe, ಖಈIಆ ಆಧಾರಿತ ಗ್ರಂಥಾಲಯ ಸ್ವಯಂಚಾಲನೆ, ಜ್ಞಾನದ ನಿರ್ವಹಣಾ ವ್ಯವಸ್ಥೆಗಳ ಕುರಿತು ತಾಂತ್ರಿಕ ಸಲಹೆಗಳನ್ನು ಅವರು ನೀಡಲಿದ್ದಾರೆ, ಈಗಾಗಲೇ ಅವರು ಪೇಟೆಂಟ್ ಪಡೆದಿರುವ ಂI-ಚಾಲಿತ ಸಂವಾದಾತ್ಮಕ ಸ್ಮಾರ್ಟ್ ಪುಸ್ತಕ ತಂತ್ರಜ್ಞಾನದ ಬಳಕೆಯನ್ನೂ ಸಹ ಅನ್ವೇಷಣೆ ಮಾಡುತ್ತಿದ್ದಾರೆ.
ಸಿಯುಕೆ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಈ ಶೈಕ್ಷಣಿಕ ಸಾಧನೆಗೆ ಡಾ.ಬೋನಾಳ ಅವರನ್ನು ಅಭಿನಂದಿಸಿದ್ದಾರೆ. ಈ ಶೈಕ್ಷಣಿಕ ಸಾಧನೆಯು ನಮ್ಮ ವಿ.ವಿ.ಯಲ್ಲಿ ಹೊಸ ನಾವೀನ್ಯತೆ, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗವಾಗಿದೆ, ಜೊತೆಗೆ ದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯ (ಓಇP) 2020 ಭಾಗವಾಗಿ ಹೊಸ ದೃಷ್ಟಿಕೋನದ ಬಗೆಗಿನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಿಯುಕೆ ಕುಲಸಚಿವರಾದ ಪೆÇ್ರ. ಆರ್. ಆರ್. ಬಿರಾದಾರ್ ಅವರು ಸಹ ಡಾ.ಬೋನಾಳ ಅವರ ಸಾಧನೆಗೆ ಅಭಿನಂದಿಸಿದ್ದಾರೆ ಮತ್ತು ಇಂತಹ ಸಲಹಾ ಯೋಜನೆಗಳು ನಮ್ಮ ವಿಶ್ವವಿದ್ಯಾಲಯದ ಹೊಸ ಹೊಸ
ಅವಿಷ್ಕಾರ, ಸಂಶೋಧನಾ ಪ್ರಗತಿ ಮತ್ತು ನಾವೀನ್ಯತೆಗೆ ಜಾಗತಿಕ ವ್ಯಾಪ್ತಿಯನ್ನು ಬಲಪಡಿಸುತ್ತವೆ ಎಂದು ಅವರು ತಿಳಿಸಿದ್ದಾರೆ.