Home ಜಿಲ್ಲೆ ಕಲಬುರಗಿ ಸಂಗೀತ ಆಲಿಸಿದರೆ ಮನಸ್ಸಿನ ನೋವು ಮರೆಯಬಹುದು:ಶೋಭಾ ದೇಸಾಯಿ

ಸಂಗೀತ ಆಲಿಸಿದರೆ ಮನಸ್ಸಿನ ನೋವು ಮರೆಯಬಹುದು:ಶೋಭಾ ದೇಸಾಯಿ

ಕಲಬುರಗಿ,ಜು.22-ಜಾನಪದ ಸಂಗೀತ ಆಕಾಶವಾಣಿ ಕಲಾವಿದರು ಬಹಳ ಮಧುರವಾಗಿ ಹಾಡಿ ನಮ್ಮೆಲ್ಲರಿಗೆ ಸಂಗೀತದ ರಸದೌತಣ ನೀಡಿದರು.
ಜಾನಪದ ಸಂಗೀತವು ಆಲಿಸಿದರೆ ನಮ್ಮ ಮನಸ್ಸಿನ ನೋವನ್ನು ಮರೆಯಬಹುದು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಶೋಭಾ ಜೆ.ದೇಸಾಯಿ ಹೇಳಿದರು.
ಸಂತೋಷ್ ಕಾಲೋನಿಯದಲ್ಲಿ ಇರುವ ಶಿವಮಂದಿರದಲ್ಲಿ ಸ್ವರಾಂಜಲಿ ಸಂಗೀತ ಸಾಹಿತ್ಯ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ ಜಾನಪದ ಲೋಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮಹಾಪೌರರಾದ ಡಾ.ಎಚ್.ಎ,ರೆಡ್ಡಿ, ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್ ಸದಸ್ಯ ಲಾಲಪ್ಪ ರಾಥೋಡ್, ನಾಗಲಿಂಗಯ್ಯ ಶಾಸ್ತ್ರಿ ಸ್ಥಾವರಮಠ ಹಾಗೂ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಪಿ ಹಿರೇಮಣಿ ಮತ್ತು ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದರಾದ ಬಸಯ್ಯ ಗೊತ್ತೇದಾರ್, ಸಿದ್ದಾರ್ಥ ಡಿ ಚಿಮ್ಮಾಇದ್ಲಾಯಿ, ಸೈದಪ್ಪ ಚೌಡಾಪುರ್, ಸೂರ್ಯಕಾಂತ್, ನಾಗೇಂದ್ರ ಸಪ್ಪನ್ಗೋಳ, ಪ್ರಶಾಂತ ಗೋಲ್ಡ್ ಸ್ಮಿತ್, ಶಿವಕುಮಾರ್ ಬಡಜೂರಗಿ ಭಾಗವಹಿಸಿದರು.