Home ಜಿಲ್ಲೆ ಕಲಬುರಗಿ ಶಿವಾ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಶಿವಾ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಕಲಬುರಗಿ,ಜು.22-ನಗರದ ಕೊಠಾರಿ ಭವನ ಎದುರುಗಡೆಯ ಗೋದುತಾಯಿ ಕಾಲೋನಿಯಲ್ಲಿರುವ ಶಿವಾ ಪಿಯು ಕಾಮರ್ಸ್ ಕಾಲೇಜಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಡಾ.ಎಸ್.ಎಸ್. ಹಂಚಿನಾಳ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊನ್ನಕಿರಣಗಿಯ ಕರಿಬಸವೇಶ್ವರ ಪ್ರೌಢಶಾಲೆ ಮುಖ್ಯಗುರು ಕಾಶಿನಾಥ ಅವರು ವಿದ್ಯಾರ್ಥಿಗಳಿಗೆ ಮುಂದೆ ಗುರಿ ಹಿಂದೆ ಗುರು ಇರಬೇಕು, ಏಕಲವ್ಯ ಇಲ್ಲದೆ ಇದ್ದರೆ ಇವತ್ತು ದ್ರೋಣಾಚಾರ್ಯರನ್ನು ನೆನೆಯುಹಾಗೆ ಇರುತ್ತಿರಲಿಲ್ಲ ಎಂದು ಹೇಳಿದರು. ವಿದ್ಯಾರ್ಥಿಗಳು ಒಳ್ಳೆಯ ಶಿಸ್ತು, ಸಮಯಪ್ರಜ್ಞೆ , ಸತತ ಪ್ರಯತ್ನ ಇದ್ದರೆ ಖಂಡಿತ ತಾವು ಯಾವುದೇ ಗುರಿಯನ್ನು ಮುಟ್ಟುತ್ತೀರಿ ಎಂದು ಸಲಹೆ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಬಸವರಾಜ್ ಸಜ್ಜನ ಅವರು ಮಾತಾಡಿ, ಈ ಕಾಲೇಜಿನಲ್ಲಿ ಒಳ್ಳೆಯ ಉಪನ್ಯಾಸಕರಿದ್ದು ಎಲ್ಲರಿಗೂ ಸಮಾನವಾಗಿ ನೋಡುವ ದೃಷ್ಟಿಕೋನ ವೈಯಕ್ತಿಕವಾದ ಕಾಳಜಿ ವಹಿಸುತ್ತಾರೆ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸುವ ಒಂದು ಒಳ್ಳೆಯ ಮಹಾವಿದ್ಯಾಲಯ ಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಅರುಣಕುಮಾರ ಅವರು ವಿದ್ಯಾರ್ಥಿಗಳ ಸರ್ವತೂಮುಖ ಬೆಳವಣಿಗೆಗೆ ನಾನು ಮತ್ತು ನಮ್ಮ ಉಪನ್ಯಾಸಕರು ಸೇರಿ ಮಾಡುತ್ತೇವೆ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮಹಾವಿದ್ಯಾಲಯ ಇದು ಆಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕ ರಾಜೇಶ, ಸಂಶೋಧನಾ ವಿದ್ಯಾರ್ಥಿ ಗಿರೀಶ, ಹಿಂಗುಲಾಂಬಿಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ರಮೇಶ ಯಾಳಗಿ, ಉಪನ್ಯಾಸಕರಾದ ಎ.ಕೆ. ರಾಠೋಡ, ಚನ್ನವೀರಯ್ಯ ಮಠ, ಐಶ್ವರ್ಯ ಗಿರೇಪ್ಪಗೋಳ, ಅಮರೇಶ್ ಹಾಲ್ವಿ, ಕುಮಾರಿ ಐಶ್ವರ್ಯ ಕುಲಕರ್ಣಿ, ವಿನೋದ ರಾಠೋಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಕ್ಕೆ 12 ನೇ ರಾಂಕ್ ಆಗಿದ್ದ ಭರತ ಬಸವರಾಜ ಅವರಿಗೆ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಕುಮಾರ ಅಭಿಷೇಕ್ ಹಾಗೂ ಕುಮಾರಿ ಐಶ್ವರ್ಯ ನಿರೂಪಿಸಿದರು. ಕುಮಾರ ರಾಘವೇಂದ್ರ ಸ್ವಾಗತಿಸಿ ಕುಮಾರಿ ನಿಕಿತಾ ವಂದಿಸಿದರು