
ಕಲಬುರಗಿ: ಯಾವುದೇ ಷರತ್ತುಗಳಿಲ್ಲದೇ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲು ಒತ್ತಾಯಿಸಿ ಮಹಿಳ ಮೀಸಲಾತಿಗಾಗಿ ರಾಷ್ಟ್ರೀಯ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಪದ್ಮಿನಿ ಕಿರಣಗಿ, ಪದ್ಮಾವತಿ ಪಾಟೀಲ, ವಿದ್ಯಾಶ್ರೀ, ಫಾತಿಮಾ ಶೇಖ್, ಶಾಂತಾ ಘಂಟೆ, ಗೌರಮ್ಮ ಪಾಟೀಲ, ಲವಿತ್ರ ವಸ್ತ್ರದ, ಜಗದೇವಿ ಹೆಗಡೆ, ಲತಾ ಚವ್ಹಾಣ್, ಲಕ್ಷ್ಮೀ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.































