
ಕಲಬುರಗಿ,ಜು.14-ನಗರದ ಅಯ್ಯರ್ ವಾಡಿಯ ದರ್ಗಾ ಹತ್ತಿರದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್ಐ ತಾರಾಸಿಂಗ್, ಸಿಬ್ಬಂದಿಗಳಾದ ಶಿವಾನಂದ, ಸುರೇಶ್, ಶಿವಶರಣ, ಅಭಿಷೇಕ ಅವರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಚಿತ್ರಶೇಖರ್ ಮರಗುತ್ತಿ, ಜಗನ್ನಾಥ ಸುಲ್ತಾನಪೂರ, ಪ್ರಕಾಶ್ ಸೂಗೂರ, ಭೀಮಾಶಂಕರ ಬೆಳಮಗಿ, ಶರಣು ಚಿನ್ನಿ ಮತ್ತು ವಿದ್ಯಾಸಾಗರ ಪೊಟ್ಟೂರ ಎಂಬುವವರನ್ನು ಬಂಧಿಸಿ 10,400 ರೂ.ನಗದು ಜಪ್ತಿ ಮಾಡಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






























