
ಕಲಬುರಗಿ,ಜು.14-ಮಕ್ಕಳಿಗೆ ಹಳ್ಳಿಯ ಸಾಹಿತ್ಯ ಸಂಸ್ಕೃತಿ ಸಂಸ್ಕಾರ ಗೊತ್ತಿರಬೇಕು ಇದನ್ನು ತಿಳಿದುಕೊಂಡು ಶಿಕ್ಷಣವನ್ನು ಪಡೆದು ಬೆಳೆದರೆ ನಾಳಿನ ನಾಡಿನ ನಮ್ಮ ಭವ್ಯ ಇತಿಹಾಸ ಹೊರಬರುತ್ತದೆ ಎಂದು ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ನಿಹಾರಿಕಾ ಪಬ್ಲಿಕೇಶನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ರಮೇಶ್ ಶಂಕ್ರಪ್ಪ ಮಾರ್ನಾಡ ಅವರ ಮೂರು ಕೃತಿಗಳು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜನಪದ ಅಂದರೆ ಬೇರೇನು ಇಲ್ಲ ಅಕ್ಕ ಹಾಲು ಹಿಂಡಿದೇನು, ಮಗ ಮಗ ಮಲಗಾನೆನಾ ಇದೇ ಜನಪದ ಸಾಹಿತ್ಯ ಎಂದು ಸರಳವಾಗಿ ತಿಳಿಸಿದ ಅವರು ಪುಸ್ತಕವನ್ನು ಖರೀದಿಸಿ ಓದಬೇಕು ಎಂದು ಸಲಹೆ ನೀಡಿದರು. ಕವನ ಸಂಕಲನದ ಪರಿಚಯವನ್ನು ಮಾಡಿದರು. ಮತ್ತೊಂದು ಕವನ ಸಂಕಲನ ಭಾವ ಧಾರೆಯ ಪರಿಚಯ ಮಾಡಿದ ಪತ್ರಕರ್ತ ಪ್ರಭಾಕರ್ ಜೋಷಿ ಅವರು, ಮಾರ್ನಾಳ್ ಅವರ ಬದುಕಿನ ಅನಂತ ಪುಟಗಳ ಅನುಭವ ಅಧ್ಯಯನ ಅಧ್ಯಾಪನ ಇವೆಲ್ಲ ಒಟ್ಟುಗೂಡಿ ಭಾವಧಾರೆಯಾಗಿದೆ ಇದರಲ್ಲಿ ಮಕ್ಕಳಾದಿಯಾಗಿ ಪ್ರಜ್ಞಾವಂತ ಓದುಗರ ತಲುಪಬಲ್ಲ 75 ಕವನಗಳಿವೆ ಎಂದು ಹೇಳಿದರು ನಾನೊಂದು ಹೆಣ್ಣಾಗಿ ಕಥಾ ಸಂಕಲನ ಪರಿಚಯಿಸಿದ ಸಾಹಿತಿ ಸಂಧ್ಯಾ ಹುನಗುಂಟಿ ಅವರು ಈ ಕೃತಿಯಲ್ಲಿ ಜೀವನ ಅನುಭವದ 15 ಕಥೆಗಳಿವೆ ಇವುಗಳಲ್ಲಿ ವಿಲನ್ಗಳು ಕಡಿಮೆ ಆದರೆ ವ್ಯವಸ್ಥೆ ಪರಿಸ್ಥಿತಿ ಶೋಷಣೆಯನ್ನು ಕಥೆಗಳಿವೆ ತಂತ್ರಗಾರಿಕೆಯ ಅಥವಾ ವೈಭವೀಕರಣ ಇಲ್ಲ ಶಿಕ್ಷಣದ ತುಡಿತ ಇದೆ ಪ್ರತಿ ಕತೆ ಚಿಂತನೆಗೆ ಹಚ್ಚುತ್ತಿದೆ ಎಂದರು.
ಅಜೀಮ್ ಪ್ರೇಮ್ ಜಿ ಸ್ಕೂಲ್ ಪ್ರಾಚಾರ್ಯರಾದ ರಾಜಶ್ರೀ ನಾಯಕ್ ಮಾತನಾಡಿ, ಅಕ್ಷರಗಳ ಸಂಗ್ರಹ ಅಥವಾ ವ್ಯಾಖ್ಯಗಳ ಜೋಡಣೆಯಿಂದ ಪುಸ್ತಕದ ಜನನ ಆಗುವುದಿಲ್ಲ ಅದು ಲೇಖಕನ ಅನುಭವ ಚಿಂತನೆ ಆಲೋಚನೆ ಮತ್ತು ಸಾಮಾಜಿಕ ಜೀವನದ ಹೊಳವುಗಳನ್ನು ಅರಿತಿರುವಂತಹ ಅಪಾರ ಜ್ಞಾನ ಭಂಡಾರವಾಗಿರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಜಿಮ್ ಪ್ರೇಮ್ ಜಿ ಫೌಂಡೇಶನ್ ಜಿಲ್ಲಾ ಮುಖ್ಯಸ್ಥ ಗ್ರಾಂಡ್ ಸನ್ ಎಂಇ ಜೆಸ್ಕಾಂ ಜಾಗೃತ ದಳ ಡಿವೈಎಸ್ಪಿ ಬಸು ಚೌಹಾನ್, ಯಾದಗಿರಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಶಾಲೆ ಪ್ರಾಚಾರ್ಯರ ಅನಿಲ್ ಎಸ್ ಅಂಗಡಿಕಿ, ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ್ ಶಾಪುರ್ಕಕರ್, ರಾಜು ಎಸ್ ರಾಠೂಡ್, ಧರ್ಮಣ್ಣ ಮತ್ತು ಇತರರು ಉಪಸ್ಥಿತರಿದ್ದರು. ಭರತ್ ಚೌಹಾಣ ಸ್ವಾಗತಿಸಿದರು. ನೂರಂದಪ್ಪನಿರೂಪಿಸಿ ವಂದಿಸಿದರು.






























