Home ಸಿನೆಮಾ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ ಗಟ್ಟಾ ಕುಸ್ತಿ 2′

ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ ಗಟ್ಟಾ ಕುಸ್ತಿ 2′

ಚಿತ್ರರಂಗದಲ್ಲಿ ಕ್ರೀಡಾ ಆಧಾರಿತ ಕೌಟುಂಬಿಕ ಮನರಂಜನಾ ಚಿತ್ರಗಳಿಗೆ ಪ್ರೇಕ್ಷಕರು ಯಾವಾಗಲೂ ಮನ ಸೋಲುತ್ತಾರೆ ಎಂಬುದಕ್ಕೆ ಸದ್ಯ ತೆರೆಕಂಡಿರುವಗಟ್ಟಾ ಕುಸ್ತಿ 2′ ಚಿತ್ರವೇ ಸಾಕ್ಷಿ. ನಟ ವಿಷ್ಣು ವಿಶಾಲ್ ಮತ್ತು ಐಶ್ವರ್ಯಾ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಯಶಸ್ವಿಯಾಗಿ ಎರಡನೇ ವಾರದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.


ಚಿತ್ರದ ಅದ್ಭುತ ಕುಸ್ತಿ ಸನ್ನಿವೇಶಗಳು ಮತ್ತು ಹೊಟ್ಟೆ ಹುಣ್ಣಾಗಿಸುವ ಹಾಸ್ಯಕ್ಕೆ ದೇಶ-ವಿದೇಶಗಳ ಪ್ರೇಕ್ಷಕರು ಮನಸೋತಿದ್ದು, ಸಿನಿಮಾ ಇದೀಗ ಸದ್ದಿಲ್ಲದೆ 50 ಕೋಟಿ ಕ್ಲಬ್‍ನತ್ತ ಮುನ್ನುಗ್ಗುತ್ತಿದೆ.


ಬಾಕ್ಸ್ ಆಫೀಸ್‍ನಲ್ಲಿ ಅಬ್ಬರ: 44 ಕೋಟಿ ದಾಟಿದ ಗಳಿಕೆ!
ವಿಶ್ಲೇಷಕರ ಪ್ರಕಾರ, ಆರಂಭಿಕ ವಾರಾಂತ್ಯದಲ್ಲೇ ಧೂಳೆಬ್ಬಿಸಿದ್ದ ಗಟ್ಟಾ ಕುಸ್ತಿ 2' ತನ್ನ ಗಲ್ಲಾಪೆಟ್ಟಿಗೆಯ ಬೇಟೆಯನ್ನು ಮುಂದುವರಿಸಿದೆ. 11ನೇ ದಿನದ ಗಳಿಕೆ: ಭಾರತೀಯ ಮಾರುಕಟ್ಟೆಯಲ್ಲಿ ಸಿನಿಮಾ ತನ್ನ 11ನೇ ದಿನದಲ್ಲಿ ಬರೋಬ್ಬರಿ 0.83 ಕೋಟಿ ಗಳಿಸಿದೆ. ಒಟ್ಟು ಭಾರತದ ಗಳಿಕೆ: ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಸಂಗ್ರಹ ?31.91 ಕೋಟಿಗೆ ತಲುಪಿದ್ದು, ಒಟ್ಟು ಗಳಿಕೆ 36.64 ಕೋಟಿಯಾಗಿದೆ. ವಿದೇಶಿ ಮಾರುಕಟ್ಟೆ: ವಿದೇಶಗಳಲ್ಲೂ ಧೂಳೆಬ್ಬಿಸುತ್ತಿರುವ ಈ ಕ್ರೀಡಾ ಸಿನಿಮಾ, ಅಲ್ಲಿಂದಲೇ ಸುಮಾರು 7.95 ಕೋಟಿ ಬಾಚಿಕೊಂಡಿದೆ. ವಿಶ್ವದಾದ್ಯಂತ ಒಟ್ಟು ಗಳಿಕೆ: ಜಾಗತಿಕವಾಗಿ ಈ ಚಿತ್ರವು ಸದ್ಯಕ್ಕೆ ?44.59 ಕೋಟಿ ಕಲೆಕ್ಷನ್ ಮಾಡುವ ಮೂಲಕ 50 ಕೋಟಿಯ ಮೈಲಿಗಲ್ಲಿನ ಸಮೀಪದಲ್ಲಿದೆ. ವಾರದ ಮಧ್ಯಭಾಗದಲ್ಲಿ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡುಬಂದರೂ, 8ನೇ ದಿನ 1.65 ಕೋಟಿ, 9ನೇ ದಿನ 3.20 ಕೋಟಿ ಹಾಗೂ 10ನೇ ದಿನ 3.40 ಕೋಟಿ ಗಳಿಸುವ ಮೂಲಕ ಚಿತ್ರ ಸ್ಥಿರವಾದ ಮಾರುಕಟ್ಟೆಯನ್ನು ಕಾಯ್ದುಕೊಂಡಿದೆ. ಯಶಸ್ಸಿನ ಸಂಭ್ರಮ ಸಿನಿಮಾದ ಈ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರತಂಡ ಹಮ್ಮಿಕೊಂಡಿದ್ದ ಧನ್ಯವಾದ ಸಮಾರಂಭ ಹಾಗೂ ಯಶಸ್ಸಿನ ಆಚರಣೆ ಭಾರಿ ಗಮನ ಸೆಳೆಯಿತು. ನಿರ್ಮಾಪಕರಿಂದ ಭರ್ಜರಿ ಗಿಫ್ಟ್: ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಖುಷಿಯಾಗಿರುವ ನಿರ್ಮಾಪಕ ಡಾ. ಇಶಾರಿ ಕೆ. ಗಣೇಶ್ ಅವರು, ಚಿತ್ರಕ್ಕಾಗಿ ಬೆವರು ಹರಿಸಿದ ನಟ ವಿಷ್ಣು ವಿಶಾಲ್ ಅವರಿಗೆ ಹೊಚ್ಚ ಹೊಸಃಒW 3 Seಡಿies’ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.