
ಕೆಆರ್ ಪುರ, ಜು.೯– ಸರ್ಕಾರಿ ಶಾಲಾ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿ ಶಿಕ್ಷಣಕ್ಕೆ ಉತ್ತೇಜನ ಕಾರ್ಯ ಮಾಡಬೇಕು
ಎಂದು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ತಿಳಿಸಿದರು.
ಕ್ಷೇತ್ರದ ಚೇಳಕೆರೆ ವಾರ್ಡ್ನಲ್ಲಿ ಮಾಜಿ ಪಾಲಿಕೆ ಸದಸ್ಯರಾದ ರಾಧಮ್ಮವೆಂಕಟೇಶ್ ಅವರು ಏರ್ಪಡಿಸಿದ್ದ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸುವುದು ನಮ್ಮ ಕರ್ತವ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸೇವಾ ಕಾರ್ಯ ಮಾಡಬೇಕು ಆಮೂಲಕ ಸಮಾಜಕ್ಕೆ ಕೋಡುಗೆ ನೀಡಬೇಕು ಎಂದು ನುಡಿದರು.
ವಿದ್ಯೆ ಕಲಿಯಬೇಕೆಂಬ ಹಂಬಲ ಹಲವು ಮಕ್ಕಳಿಗಿದ್ದರೂ ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದರಿಂದ ಎಷ್ಟೋ ಮಕ್ಕಳು ವಿದ್ಯೆಯಿಂದ ದೂರ ಉಳಿದು ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯರು ಹಾಗೂ ಚೇಳಕೆರೆ ವಾರ್ಡನ ಆಕಾಂಕ್ಷಿ ರಾಧಮ್ಮವೆಂಕಟೇಶ್ ಅವರು ಮಾತನಾಡಿ ಈ ಸಮಾಜ ಸೇವೆ ಕಾರ್ಯ ಮಾಡಿಕೊಳ್ಳುತ್ತಾ ಬರುತ್ತಿದ್ದು ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಉಳ್ಳವರು ತಮಗೆ ಬೇಕಾದಷ್ಟು ಇಟ್ಟುಕೊಂಡು ಉಳಿದನ್ನು ಬಡವರಿಗೆ ದಾನ ಮಾಡಿದರೆ ಬಡತನ ಸಮಾಜದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡನ ಅಧ್ಯಕ್ಷ ನಿರೂಪ್ ವೆಂಕಟರಮಣ ರೆಡ್ಡಿ, ಬಾಬುಸಾಪಾಳ್ಯ ಎಸ್.ಬಾಬು,ಮುಖಂಡರಾದ ಅಗರ ಪ್ರಕಾಶ್,ಸುರೇಶ್ ಇದ್ದರು.



























