Home ಜಿಲ್ಲೆ ಮಂಗಳೂರು ಐಎಸ್‌ಟಿಡಿ ಮಂಗಳೂರು- ಉಡುಪಿ ಘಟಕದ ಅಧ್ಯಕ್ಷರಾಗಿ ಶಿವಾನಿ ಬಾಳಿಗಾ ಆಯ್ಕೆ

ಐಎಸ್‌ಟಿಡಿ ಮಂಗಳೂರು- ಉಡುಪಿ ಘಟಕದ ಅಧ್ಯಕ್ಷರಾಗಿ ಶಿವಾನಿ ಬಾಳಿಗಾ ಆಯ್ಕೆ

ಕಲಿಕೆ, ತರಬೇತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮೀಸಲಾದ ಭಾರತದ ಪ್ರಮುಖ ವೃತ್ತಿಪರ ಸಂಸ್ಥೆಯಾದ ’ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಅಂಡ್ ಡೆವಲಪ್‌ಮೆಂಟ್ (ಐಎಸ್‌ಟಿಡಿ) ನಗರದ ಶಂಕರ ಭವನದಲ್ಲಿ ಮಂಗಳವಾರ, ಜೂನ್ ೩೦ ರಂದು ನಡೆದ ಸಮಾರಂಭದಲ್ಲಿ ಶಿವಾನಿ ಬಾಳಿಗಾ ಅವರನ್ನು ಮಂಗಳೂರು?ಉಡುಪಿ ಘಟಕದ ಅಧ್ಯಕ್ಷೆಯನ್ನಾಗಿ ಪದಗ್ರಹಣ ಮಾಡಿಸಿದರು.
ನೂತನ ತಂಡದಲ್ಲಿ ಡಾ. ಭಾರತಿ ಶೆವಗೂರ್ (ಉಪಾಧ್ಯಕ್ಷೆ), ವಿದ್ಯಾ ಭಟ್ (ಕಾರ್ಯದರ್ಶಿ) ಹಾಗೂ ಪ್ರೀತಂ ಕಾಮತ್ (ಖಜಾಂಚಿ) ಸೇರಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ಸುಭಾ? ಬಂಗೇರ, ಡಾ. ಪ್ರೀತಿ ಡಿ’ಸೋಜಾ, ಡಾ. ದೀಪಾ ಕೋಟಾರಿ ಹಾಗೂ ಪೀಟರ್ ಪಿಂಟೊ ಸದಸ್ಯರಾಗಿದ್ದಾರೆ. ನಿವೇದಿತಾ ಮಿರಜ್ಕರ್, ಡಾ. ಝಿಟಾ ಲೋಬೊ ಹಾಗೂ ಸಿಎ ಎಂ. ಎನ್. ಪೈ ಅವರು ಸಂಸ್ಥೆಯ ರಾಷ್ಟ್ರೀಯ ಮಂಡಳಿಯಲ್ಲಿ ಮಂಗಳೂರು?ಉಡುಪಿ ಘಟಕವನ್ನು ಪ್ರತಿನಿಧಿಸಲಿದ್ದಾರೆ. ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿ ಕಲಿಕೆ, ನಾಯಕತ್ವ ಅಭಿವೃದ್ಧಿ ಹಾಗೂ ವೃತ್ತಿಪರ ಶ್ರೇ?ತೆಯನ್ನು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಾನಿ ಬಾಳಿಗಾ ಅವರು ನೂತನ ತಂಡದ ಮೇಲೆ ಇಟ್ಟಿರುವ ವಿಶ್ವಾಸಕ್ಕಾಗಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸದಸ್ಯರ ತೊಡಗಿಸಿಕೊಳ್ಳುವಿಕೆ, ಜ್ಞಾನ ವಿನಿಮಯ, ಕಲಿಕಾ ಚಟುವಟಿಕೆಗಳು ಹಾಗೂ ಉದ್ಯಮ?ಶೈಕ್ಷಣಿಕ ಸಹಭಾಗಿತ್ವವನ್ನು ಬಲಪಡಿಸುವ ಯೋಜನೆಗಳನ್ನು ವಿವರಿಸಿದರು. ಪ್ರಾದೇಶಿಕ ಮಟ್ಟದಲ್ಲಿ ಭವಿ?ಕ್ಕೆ ಸಜ್ಜಾದ ವೃತ್ತಿಪರರು ಹಾಗೂ ಸಂಸ್ಥೆಗಳ ಬೆಳವಣಿಗೆಗೆ ಘಟಕವು ತನ್ನ ಬೆಂಬಲವನ್ನು ಮುಂದುವರಿಸಲಿದೆ ಎಂದು ಹೇಳಿದರು.
ಐಎಸ್‌ಟಿಡಿ ಮಂಗಳೂರು?ಉಡುಪಿ ಘಟಕದ ಸಂಸ್ಥಾಪಕ ಸದಸ್ಯ ಪ್ರೊ. ರಾಮಕೃ? ಚಡಗ ಅವರು ಸಮಾರಂಭದಲ್ಲಿ ಭಾಗವಹಿಸಿ ನೂತನ ತಂಡವನ್ನು ಅಭಿನಂದಿಸಿದರು. ನಿರಂತರ ಕಲಿಕೆ ಮತ್ತು ವೃತ್ತಿಪರ ಅಭಿವೃದ್ಧಿಯ ಮಹತ್ವದ ಕುರಿತು ಮಾತನಾಡಿದರು.