
ಔರಾದ್ : ಸಮಾಜದಲ್ಲಿ ಧಾರ್ಮಿಕ ಚಿಂತನೆ, ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆ ಹಾಗೂ ಹಿಂದೂ ಸಮಾಜದ ಸಂಘಟನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕನ್ನೇರಿ ಮಠದ ಕುಮಾರ ಸ್ವಾಮಿ ತಿಳಿಸಿದರು.
ಬರುವ ಜೂನ್೨೮ ರಂದು ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆಯುವ ಈ ಸಮಾವೇಶದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಲಿದ್ದು, ಧರ್ಮ, ಸಂಸ್ಕೃತಿ, ಸಾಮಾಜಿಕ ಜಾಗೃತಿ ಮತ್ತು ಯುವಜನರ ಪಾತ್ರ ಕುರಿತು ವಿಶೇಷ ಮಾರ್ಗದರ್ಶನ ನಡೆಯಲಿದೆ, ಸಜ್ಜನರು ಮೌನರಾದಾಗ ದುರ್ಜನರು ಎದ್ದು ಕುಣಿಯುತ್ತ ಸುಳ್ಳಗಳಿಗೆ ಸತ್ಯದ ಲೇಪನ ಮಾಡುತ್ತಾರೆ ನಾವೆಲ್ಲರೂ ಜಾಗರೂಕರಾಗಿದ್ದಾಗ ಅಂತಹವರನ್ನು ಬದಿಗಿಟ್ಟು ಮುಂದಿನ ಪೀಳಿಗೆಗೆ ಸಂಸ್ಕಾರದ ಹಾಗೂ ಸತ್ಯದ ಮಾರ್ಗ ತೋರಿಸುವ ಕಾರ್ಯ ಮಾಡೋಣ ಎಂದರು.
ಡೋಣಗಾಂವ ಹಾವಗಿಸ್ವಾಮಿ ಮಠದ ಡಾ.ಶಂಭುಲಿAಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶವು ಸಮಾಜದ ಏಕತೆ ಹಾಗೂ ಅಭಿವೃದ್ಧಿ, ಸಮಾಜದಲ್ಲಿ ಸಹೋದರತೆ, ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆ ಹಾಗೂ ಧಾರ್ಮಿಕ ಜಾಗೃತಿಗೆ ಹೊಸ ಆಯಾಮ ನೀಡಲಿದೆ ನಮ್ಮ ಹಿಂದೂ ದೇಶದಲ್ಲಿ ನಾವು ಹಿಂದೂ ಸಮಾವೇಶಕ್ಕೆ ವಿರೋಧ ವಾಗುತ್ತಿದೆ, ಎಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿವೆಯೋ ಅಲ್ಲಿ ಅಡಚಣೆ ಬರುವುದು ಸಹಜ, ರಾಜ್ಯದಲ್ಲಿ ಎಲ್ಲಿಯೂ ಆಗದ ವಿರೋಧ ಬಸವಕಲ್ಯಾಣ ದಲ್ಲಿ ಯಾಕೆ ಎನ್ನುವುದು ಎಲ್ಲರಿಗೂ ತಿಳಿದಿದೆ ನಾವೆಲ್ಲರೂ ಒಂದಾಗಿ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಕೈಜೋಡಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಹಣೆಗಾವ ಶಂಕರಲಿAಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕನ್ನೇರಿ ಮಠ ಸಮಾಜಕ್ಕೆ ಸಮರ್ಪಿತವಾದ ಮಠ, ಹಿಂದೂ ದೇವತೆಗಳ ಬಗ್ಗೆ ಅವಹೇಳನ ಮಾಡುವ ಮನಸ್ಥಿತಿ ಹೊಂದಿದ ಮಠಾಧೀಶರು ಅವರು ನಿಜವಾದ ಮಠಾಧೀಶರು ಆಗಲು ಸಾಧ್ಯವಿಲ್ಲ ಸಮ ಸಮಾಜ ನಾವೆಲ್ಲರೂ ಒಂದೇ ಎಂದು ಸಾರಿದ ಜಗಜ್ಯೋತಿ ಬಸವೇಶ್ವರರ ಹೆಸರು ಹಾಳು ಮಾಡುವ ಜನರನ್ನು ನಾವು ಬದಿಗಿಟ್ಟು ಮುಂದೆ ಸಾಗಬೇಕು. ಬಸವಣ್ಣನವರು ಇಡೀ ಸಮಾಜದ ಸ್ವತ್ತು, ಹೊರಗಿನವರು ಬಂದು ಬಸವಕಲ್ಯಾಣ ದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಿಜವಾದ ಬಸವಣ್ಣನವರ ಭಕ್ತರು ಯಾರು ವಿರೋಧ ಮಾಡುತ್ತಿಲ್ಲ, ಸಮಾಜ ಒಡೆಯುವ ಕಾರ್ಯ ಯಾರು ಮಾಡಬಾರದು ಗುರುವಿನ ಸ್ಥಾನದಲ್ಲಿ ನಿಂತ ಕೆಲ ಮಠಾಧೀಶರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿರುವುದು ಶೋಚನೀಯ ನಾವೆಲ್ಲರೂ ಜಾಗೃತರಾಗಿ ಕನ್ನೇರಿ ಶ್ರೀಗಳ ಈ ಸಮಾವೇಶ ಯಶಸ್ಸು ಮಾಡೋಣ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಿವಪ್ಪ ಅಪ್ಪಾ ಖಂಡೆಕೇರಿ, ಬಸವರಾಜ ದೇಶಮುಖ, ಕಲ್ಯಾಣರಾವ ದೇಶಮುಖ, ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ, ಡಾ.ವೈಜಿನಾಥ ಬುಟ್ಟೆ, ಡಾ.ಧನರಾಜ ರಾಗಾ, ಜಿಲ್ಲಾ ಸಂಯೋಜಕ ಶ್ರೀಕಾಂತ ಮೋದಿ, ಬಸವರಾಜ ನಿಟ್ಟೂರೆ, ಅಮೃತರಾವ ಬಿರಾದಾರ, ಶಿವರಾಜ ಶೆಟಕಾರ, ಗುರುನಾಥ ದೇಶಮುಖ, ಸೂರ್ಯಕಾಂತ ವಲ್ಲೆಪೂರೆ, ರಾಜಕುಮಾರ ನಾಯಕ, ಶಿವಾಜಿ ಬೋಗಾರ, ಮಂಜು ಸ್ವಾಮಿ, ಅಶೋಕ ಶೆಂಬೆಳ್ಳಿ, ಬಸವರಾಜ ಹಳ್ಳೆ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನಳಗೆ, ಅನಿಲ ಮೇತ್ರೆ, ಶಶಿಕಾಂತ, ಬಸವ ಚೌಕಂಪಳ್ಳೆ, ಚಂದ್ರಕಾAತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


























