Home ಜಿಲ್ಲೆ ಹಬೊಹಳ್ಳಿ : ಗೂಳಿ ಹಿರಿತ ಮೂವರಿಗೆ ಗಾಯ 

ಹಬೊಹಳ್ಳಿ : ಗೂಳಿ ಹಿರಿತ ಮೂವರಿಗೆ ಗಾಯ 

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಜೂ.06 ಪಟ್ಟಣದ ಬೀಡಾಡಿ ಗೂಳಿ ಯೊಂದು ಮೂವರನ್ನು ತಿವಿದು ಗಾಯಗೊಳಿಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಬೋವಿ ಕಾಲೋನಿಯಲ್ಲಿ ಇಬ್ಬರಿಗೆ ಹಾಗೂ ಎಪಿಎಂಸಿ ಹತ್ತಿರ ಒಬ್ಬರಿಗೆ ಹಿರಿದು  ಗಾಯ ಗೊಳಿಸಿದೆ. ಸೊಂಟ ಹಾಗೂ ಮೊಣಕಾಲು ಭಾಗದಲ್ಲಿ ಗಾಯಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಸಂಬಂಧ ಎಕ್ಸರೇ ಮಾಡಿಸಲಾಗಿದ್ದು, ಮೂಳೆ ತಜ್ಞರನ್ನು ಬೇಟೆಯಾಗಲು ತಿಳಿಸಲಾಗಿದೆ ಎಂದು ತಾಲೂಕ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನಾರ್ಮಲ್ ಇಲ್ಲದ ಈ ಗೂಳಿ  ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿರುವುದು ಕಂಡು ಪುರಸಭೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟು ಗೂಳಿಯನ್ನು ಕಟ್ಟಿ ಹಾಕಿದ್ದು. ಈ ವೇಳೆ ಗೂಳಿ ವಾಂತಿ ಮಾಡಿಕೊಂಡು ಸಾವನ್ನಪ್ಪಿದೆ.