ಕಲಬುರಗಿ:ವಿಬಿಜಿರಾಮ್‍ಜಿ ಯೋಜನೆ ರದ್ದುಪಡಿಸಿ ಮನರೆಗಾ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿ.ಪಂ.ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಉಪಾಧ್ಯಕ್ಷ ಮೌನೇಶ ನಾಲವಾರ, ಸಿದ್ದಮ್ಮ, ಚಂದ್ರಪ್ಪ ಪೂಜಾರಿ, ಸಾಯಿಬಣ್ಣಾ ಕೊರಬಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.