
ಕಲಬುರಗಿ,ಜೂ.5-ಕಲಬುರಗಿ ಗ್ರಾಮೀಣ ಭಾಗವಾದ ಫರಹತಾಬಾದ್ ಪ್ರದೇಶದಲ್ಲಿ ಕಾನೂನು ಬಾಹಿರ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿಗೆ ಆರೋಗ್ಯ ಮತ್ತು ಪೆÇಲೀಸ್ ಇಲಾಖೆ ಮೇಲೆ ದಾಳಿ ನಡೆಸಲಾಯಿತು. ಅಔಖಿPಂ ಂಅಖಿ 2003 ಕಟ್ಟುನಿಟ್ಟಿನ ಅನುಷ್ಠಾನ ಮಾಡುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಪೆÇಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ 26 ಅಂಗಡಿಗಳ ಮೇಲೆ ದಾಳಿ ಮಾಡಿ 2,660 ದಂಡ ವಿಧಿಸಲಾಯಿತು.
ಜಿಲ್ಲಾಧಿಕಾರಿಗಳ ಸಭಾ ನಡವಳಿಕೆ ಆದೇಶದ ಮೇರೆಗೆ, ಕಲಬುರಗಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ-2003 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರ, ಫರಹತಾಬಾದ್ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪೆÇಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಶರಣಬಸಪ್ಪ ಖ್ಯಾತನಾಳ ರವರ ನಿರ್ದೇಶನದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ( ಡಿ ಎಸ್ ಓ ) ಡಾ. ರಾಕೇಶ ಕಾಂಬಳೆ. ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬಳೆ ಅವರ ಸಲಹೆ ಮೇರೆಗೆ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷ್ ಪಾಟೀಲ ಸಹಕಾರದೊಂದಿಗೆ ನಡೆದ ಈ ದಾಳಿಯಲ್ಲಿ ಶಾಲಾ-ಕಾಲೇಜುಗಳ 100 ಗಜದೊಳಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ. 26 ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆಸಿ, ಒಟ್ಟು 2,660 ದಂಡ ವಸೂಲಿ ಮಾಡಲಾಯಿತು.
ಜಾಗೃತಿ ಕಾರ್ಯಕ್ರಮ: ಸರ್ಕಾರಿ ಪ್ರೌಢ ಶಾಲೆ, ಫರಹತಾಬಾದ್‍ನಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, “ತಂಬಾಕು ಮುಕ್ತ ಶಾಲೆ” ಘೋಷಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಸಸಿ ನೆಡುವ ಮೂಲಕ “ಆರೋಗ್ಯವಂತ ಮಗು, ಸದೃಢ ಭಾರತ” ಸಂದೇಶ ಸಾರಲಾಯಿತು. ಅಂಗಡಿಕಾರರಿಗೆ ಅಔಖಿPಂ ಕಾಯ್ದೆಯ ಸೆಕ್ಷನ್ 4 & 6 ರ ಬಗ್ಗೆ ಎಚ್ಚರಿಕೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತ ಪಾಟೀಲ ಹಾಗೂ ತಂಡ, ಹಿರಿಯ ಆರೋಗ್ಯ ನಿರೀಕ್ಷಾಧಿಕಾರಿ ಸಂತೋಷ್ ಮುಲಜೆ, ಸೋಶಿಯಲ್ ವರ್ಕರ್ ಕು.ಆರತಿ ಧನಶ್ರೀ , ಡಿ ಇ ಓ ರವಿ ಪೂಜಾರಿ. ಹಾಗೂ ಸ್ಥಳೀಯರಾದ ಗಂಗೂಬಾಯಿ, ಬ್ಲಾಕ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿರೂಪಾಕ್ಷಯ್ಯ ಹಿರೇಮಠ, ಹಾಗೂ ಪೆÇಲೀಸ್ ಇಲಾಖೆ ಅಧಿಕಾರಿಗಳು ದಾಳಿ ವೇಳೆ ಉಪಸ್ಥಿತರಿದ್ದರು.

























