Home ಜಿಲ್ಲೆ ಕಲಬುರಗಿ ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣ ಪತ್ರ ವಿತರಣೆ

ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣ ಪತ್ರ ವಿತರಣೆ

ಕಲಬುರಗಿ,ಜೂ.5: ಕೇಂದ್ರ ಕಾರಾಗೃಹದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಪಡೆದಿರುವ ಕೈದಿಗಳಿಗೆ ಪ್ರಮಾಣ ಪತ್ರ ಮತ್ತು ನೂತನ ತರಬೇತಿದಾರರಿಗೆ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಫಾದರ್ ವಿಲಿಯಂ ಮಿರಿಂಡಾ ಮಾತನಾಡುತ್ತಾ,ನೀವು ತರಬೇತಿಯನ್ನು ಪಡೆದು ಜೀವನಕ್ಕೆ ಒಂದು ಅಡಿಪಾಯ ಸಿಕ್ಕಂತೆ ಆಗುತ್ತದೆ. ನಿಮ್ಮ ಜೀವನವು ಹಸಿರುಮಯವಾಗಿ ಮುಂದಿನ ಬದುಕಿಗೆ ದಾರಿ ದೀಪವಾಗುತ್ತದೆಂದು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಅದಾನಿ ಗ್ರೂಪ್ ಸಂಯೋಜಿಕ ಅಶೋಕ ಬಿ ಹಾಲವಿ, ಸಹಾಯಕ ಅಧೀಕ್ಷಕ ಬಿ. ಸುರೇಶ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಅಧೀಕ್ಷಕ ರಾಕೇಶ ಕಾಂಬಳೆ , ಪ್ರಮಾಣ ಪತ್ರ ಹಾಗೂ ಕಿಟ್ ವಿತರಿಸಿ ಮಾತನಾಡುತ್ತಾ, ಕಾರಾಗೃಹದಲ್ಲಿರುವ ಎಲ್ಲಾ ಬಂದಿಗಳು ಸರದಿ ಪ್ರಕಾರವಾಗಿ ಕಂಪ್ಯೂಟರ್ ಶಿಕ್ಷಣ ನೀಡುವುದರ ಜೊತೆಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ಸಹ ನೀಡಲಾಗುತ್ತದೆ. ಪ್ರತಿಯೊಬ್ಬ ಬಂದಿಯು ವೃತ್ತಪರ ತರಬೇತಿಗಳನ್ನು ಪಡೆದು ಹಾಗೂ ತರಬೇತಿ ಪಡೆದಿರುವ ಬಂದಿಗಳಿಗೆ ವಿಶೇಷ ಮಾಫಿಯನ್ನು ನೀಡಲಾಗುವುದು ಅದರ ಉಪಯೋಗ ಪಡೆದುಕೊಂಡು ಈ ಕಾರಾಗೃಹದಿಂದ ಬಿಡುಗಡೆ ಹೊಂದಿ ಸಮಾಜದೊಂದಿಗೆ ಬೆರೆತು ಈ ಕಾರಾಗೃಹದಲ್ಲಿ ಪಡೆದಂತಹ ತರಬೇತಿಗಳನ್ನು ಅಳವಡಿಸಿಕೊಂಡು ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಒಬ್ಬ ಒಳ್ಳೆಯ ನಾಗರೀಕನಾಗಿ ಬಾಳುವೆ ನಡಸಿ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕೆಂದು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ 30 ಜನ ತರಬೇತಿ ಪಡೆದ ಪ್ರಶೀಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ 30 ಜನ ನೂತನ ಪ್ರಶೀಕ್ಷಣಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜೈಲರ್ ಶಾಮ ಬಿದರಿ ಹಾಗೂ ಫಾದರ್ ಮ್ಯಾಕ್ಸಿಂ ಫಾದರ್ ಸಿಬ್ಬಂದಿ ಮಂಜುನಾಥ ಹಾಗೂ ಕಂಪ್ಯೂಟರ್ ಶಿಕ್ಷಕ ಹರೀಶ್ ದತ್ತಾತ್ರೇಯ ಗೌಳಿ ಉಪಸ್ಥಿತರಿದ್ದರು.
ಈ ಕಾರಾಗೃಹದ ಬಂದಿ ಶಿವಶಂಕರ್ ಪ್ರಾರ್ಥನ ಗೀತೆಯನ್ನು ಹಾಡಿದರು. ಮುಖ್ಯ ವೀಕ್ಷಕ ಶ್ರೀಕಾಂತ್ ರಂಜೇರಿ ದೇಶಭಕ್ತಿ ಗೀತೆ ಹಾಡಿದರು. ಸಹಾಯಕ ಆಡಳಿತಾಧಿಕಾರಿ ಸ್ವಾಗತ ಭಾಷಣ ಮಾಡಿದರು. ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಣೆಯ ಜೊತೆಗೆ ವಂದಿಸಿದರು.