Home ಜಿಲ್ಲೆ ಸುರಕ್ಷತಾ ಕ್ರಮ ಕೈಗೊಳ್ಳಲು ಆಗ್ರಹ

ಸುರಕ್ಷತಾ ಕ್ರಮ ಕೈಗೊಳ್ಳಲು ಆಗ್ರಹ

ನವಲಗುಂದ,ಜೂ೫: ತಾಲೂಕಿನ ತಡಹಾಳ ತಿರ್ಲಾಪುರ ಗೊಬ್ಬರ ಗುಂಪಿ ಸೇರಿದಂತೆ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳ ನೀರು ಕಲುಷಿತಗೊಂಡಿದ್ದು ತಕ್ಷಣ ತಾಲೂಕ ಆಡಳಿತ ಕಲುಷಿತಗೊಂಡ ಕುಡಿಯುವ ನೀರಿನ ಕೆರೆಗಳ ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ ಕುಡಿಯಲಿಕ್ಕೆ ಯೋಗ್ಯ ಇದೆಯೋ ಅಥವಾ ಇಲ್ಲ ಎಂಬುದನ್ನು ದೃಢೀಕರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಆರೋಗ್ಯ ಇಲಾಖೆ ಹಾಗೂ ತಾಲೂಕ ಆಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಈ ಹಿಂದೆ ಗೊಬ್ಬರ ಗುಂಪಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಕುಡಿಯುವ ನೀರಿನ ಆದ್ಯತೆಗೆ ಕ್ರಮ ಕೈಕೊಳ್ಳಲು ವಿನಂತಿಸಿಕೊAಡರು.


ತಾಲೂಕ ಆಡಳಿತ ಸುರಕ್ಷಿತ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಧಾರವಾಡ ಜಿಲ್ಲಾ ಬಿಜೆಪಿ (ಗ್ರಾಮೀಣ) ಕಾರ್ಯದರ್ಶಿಗಳಾದ ದೇವರಾಜ ಬ. ದಾಡಿಬಾವಿ ಆರೋಪಿಸಿದ್ದಾರೆ. ತಾಲೂಕು ಆಡಳಿತ ತಕ್ಷಣ ಕುಡಿಯುವ ನೀರಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕ ಆಡಳಿತಕ್ಕೆ ದೇವರಾಜ ಬ. ದಾಡಿಬಾವಿ ಆಗ್ರಹಿಸಿದ್ದಾರೆ.