Home ಜಿಲ್ಲೆ ಕಲಬುರಗಿ ಕೃಷಿ ಮಳಿಗೆಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ಅನಿರೀಕ್ಷಿತ ದಾಳಿ:ನಿಯಮ ಉಲ್ಲಂಘಿಸಿದ ಮಾರಾಟಗಾರರಿಗೆ ನೋಟಿಸ್ ಜಾರಿ

ಕೃಷಿ ಮಳಿಗೆಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ಅನಿರೀಕ್ಷಿತ ದಾಳಿ:ನಿಯಮ ಉಲ್ಲಂಘಿಸಿದ ಮಾರಾಟಗಾರರಿಗೆ ನೋಟಿಸ್ ಜಾರಿ

ಕಲಬುರಗಿ, ಮೇ,30 : ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರವನ್ನು ನಿಗದಿಗಿಂತ ಬೆಲೆಗೆ ಮಾರಾಟ ಮಾಡಬೇಕು ಅನಾವಶ್ಯಕವಾಗಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುವವರ ವಿರುದ್ಧ ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಅವಶ್ಯಕ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು ಮಾರಾಟಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರದಂದು ಕಲಬುರಗಿ ಜಿಲ್ಲೆಯ ಜೇವರ್ಗಿ, ಯಡ್ರಾಮಿ, ಚಿತ್ತಾಪುರ ಹಾಗೂ ಸೇಡಂ ತಾಲ್ಲೂಕುಗಳ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳ ಮೇಲೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡವು ಅನಿರೀಕ್ಷಿತ ದಾಳಿ ನಡೆಸಿ, ತಪಾಸಣೆ ಕೈಗೊಂಡು ಏ-ಏISಂಓ ತಂತ್ರಾಂಶದಲ್ಲಿ ರಸಗೊಬ್ಬರ ವಿತರಿಸುತ್ತಿರುವ ಕುರಿತು ಹಾಗೂ ರಸಗೊಬ್ಬರÀದ ದಾಸ್ತಾನಿನ ವಿವರ ಹಾಗೂ PಔS ದಾಸ್ತಾನನ್ನು ಪರಿಶೀಲಿಸಿದರು.

ರೈತರಿಗೆ ನಿಗದಿಗಿಂತ ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ತಪ್ಪಿತಸ್ಥ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಲು ಈ ಜಂಟಿ ದಾಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಾರ್ಕೆಟನಲ್ಲಿರುವ ಗೋದಾಮುಗಳಿಗೆ ಬೇಟಿ ನೀಡಿ ಈಅಔ-1985 (ಈeಡಿಣiಟizeಡಿ ಅoಟಿಣಡಿoಟ ಔಡಿಜeಡಿ) ಉಲ್ಲಂಘಿಸಿದ ಮಾರಾಟಗಾರರಿಗೆ ನೋಟಿμï ನೀಡಲಾಗಿದ್ದು, ಅವರ ಮಾರಾಟ ಪರವಾನಿಗೆ ಮೇಲೆ ಮುಂದಿನ ದಿವಸಗಳಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

 ಕೃಷಿ ಪರಿಕರ ಮಾರಾಟಗಾರರು ತೆಗೆದುಕೊಂಡ ಕ್ರಮಗಳು:- ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಮೇಲೆ ತೆಗೆದುಕೊಂಡ ಕ್ರಮಗಳ ಮಾಹಿತಿ ಪಡೆದುಕೊಂಡರು. ಜೇವರ್ಗಿ, ಯಡ್ರಾಮಿ, ಸೇಡಂ, ಚಿತ್ತಾಪೂರ ಸೇರಿದಂತೆ ಒಟ್ಟು 28 ಮಳಿಗೆಗಳನ್ನು ಪರಿಶೀಲಿಸಿದರು. ಒಟ್ಟು 26 ಮಳಿಗೆಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದರು.  ಮಾರಾಟ ತಡೆ ಆದೇಶದ ಮಳಿಗೆಗಳ ಸಂಖ್ಯೆ 10, ಪ್ರಮಾಣ (ಟನ್‍ಗಳಲ್ಲಿ )  ಜೇವರ್ಗಿ 192.4  ಒಟ್ಟು ಮೊತ್ತ ರೂ.  45.75 ರೂ. ಲಕ್ಷಗಳು.

ಈ ಅನಿರೀಕ್ಷಿತ ದಾಳಿಯ ತಂಡದಲ್ಲಿ ಕಲಬುರಗಿ ಉಪ ಕೃಷಿ ನಿರ್ದೇಶಕರಾದ ಡಾ. ಬಾಲರಾಜ್ ಗಂಗರಾವ್, ಸೇಡಂ ಉಪ ಕೃಷಿ ನಿರ್ದೇಶಕರಾದ ಅನಸೂಯಾ ಹೂಗಾರ, ಜಾರಿದಳದ ಸಹಾಯಕ ಕೃಷಿ ನಿರ್ದೇಶಕರು, ಸಂಬಂಧಪಟ್ಟ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.