
ಕಲಬುರಗಿ,ಮೇ.30-ನಗರದ ಜೆ.ಆರ್.ನಗರ ಕರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಭಾಗ್ಯಶ್ರೀ ಸಾಂಸ್ಕøತಿಕ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಂಗೀತೋತ್ಸವ ಕಾರ್ಯಕ್ರಮವನ್ನು ನಾಗಮ್ಮ ಅಮರ್ ಗೊಂಡ ಉದ್ಘಾಟಿಸಿ ಮಾತನಾಡುತ್ತಾ ಸಂಗೀತದ ಕಡೆ ಒಲವು ಹೆಚ್ಚು ಕೊಡಬೇಕು. ಸಂಗೀತ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಆದರೆ, ಇವತ್ತಿನ ಕಂಪ್ಯೂಟರ್, ಮೊಬೈಲ್ ಯುಗದಲ್ಲಿ ಸಂಗೀತವನ್ನು ಮರೆತು ಹೋಗಲಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯವೆಂದು ಹೇಳಿದರು.
ವೇದಿಕೆ ಮೇಲೆ ಪರಮೇಶ್ವರ ಹಳಿ ಜೋಳ, ಶರಣ್ ಗೌಡ ಪಾಟೀಲ್ ನಿಂಬರ್ಗಾ, ಮಾಳಪ್ಪ ಪೂಜಾರಿ, ಬಸವರಾಜ್ ಪಾಟೀಲ್, ಅಮರ ಚಿಚಕೋಟಿ, ವಿಜಯಕುಮಾರ ಕಿಟ್ಟಾ ಅಲ್ಲದೆ ಅನೇಕ ಗಣ್ಯ ಮಾನ್ಯ ವ್ಯಕ್ತಿಗಳು ಉಪಸ್ಥಿತರಿದ್ದರು
ಅಣ್ಣಾರಾಯ ಮತ್ತಿ ಮೂಡ, ಸೈದಪ್ಪ ಚೌಡಾಪುರ, ಶಿವಕುಮಾರ್ ಪಾಟೀಲ್, ವಿಜಯಲಕ್ಷ್ಮಿ ಕೆಂಗನಾಳ, ಶಿವಪುತ್ರಪ್ಪ ಜೋಗುರ್ ಎಲ್ಲಾ ಕಲಾವಿದರು ತಮ್ಮ ಶುಶ್ರಾವೆ ಕಂಠದಿಂದ ಸಂಗೀತ ಸೇವೆ ಸಲ್ಲಿಸಿದರೆಂದು ಭಾಗ್ಯಶ್ರೀ ಕಲಾ ಸಂಸ್ಕೃತಿಕ ಸಂಘದ ಅಧ್ಯಕ್ಷರಾದ ಶಾಂಬಾಯಿಶಿವಾನಂದ ಬಳೂರಗಿ ತಿಳಿಸಿದ್ದಾರೆ.
























