Home ಜಿಲ್ಲೆ ಕಲಬುರಗಿ ಪಡಸಾವಳಿಯಲ್ಲಿ ಅಗ್ನಿ ದುರಂತ :ಸುಟ್ಟು ಕರಕಲಾದ ಫರ್ನೀಚರ್ ಅಂಗಡಿ

ಪಡಸಾವಳಿಯಲ್ಲಿ ಅಗ್ನಿ ದುರಂತ :ಸುಟ್ಟು ಕರಕಲಾದ ಫರ್ನೀಚರ್ ಅಂಗಡಿ

ಅಳಂದ,ಮೇ 30: ತಾಲೂಕಿನ ಪಡಸಾವಳಿ ಗ್ರಾಮದ ನಿವಾಸಿ ಮಲ್ಲಿನಾಥ ಸುತಾರ ಎಂಬುವರರ ಫರ್ನೀಚರ್ ಅಂಗಡಿಗೆ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಬೆಲೆ ಬಾಳುವ ಯಂತ್ರಗಳು, ದುಬಾರಿ ವೆಚ್ಚದ ಕುಶಲ ಕೆತ್ತನೆಯ ವಸ್ತುಗಳು ಸುಟ್ಟು ಕರಕಲವಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು, ಗ್ರಾಮಸ್ಥರು ಅಗ್ನಿ ನಂದಿಸಲು ಹರಸಹಾಸಗೈದರು. ಧಗಧಗಿಸುವ ಅಗ್ನಿಯ ಎದರು ಕೈ ಚೆಲ್ಲುವಂತಾಯಿತು. ಅಷ್ಟೊತ್ತಿಗೆ ಸಂಪೂರ್ಣ ಅಂಗಡಿ ಸುಟ್ಟು ಕರಕಲಾಗಿತ್ತು.
ಸುದ್ದಿ ತಿಳಿದು ತಾಲೂಕು ವಿಶ್ವಕರ್ಮ ಸಂಘಟನಾ ಅಧ್ಯಕ್ಷ ಬಸವರಾಜ ವಿಶ್ವಕರ್ಮ, ಹೋರಾಟಗಾರ ಶ್ರೀಶೈಲ ಸುತಾರ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿತಗುಲಿ ಮೂರು ದಿನವಾದರು ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕುಲಕಸುಬನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ವಿಶ್ವಕರ್ಮರ ಸಹಾಯಕ್ಕೆ ಅಧಿಕಾರಿಗಳು ನೇರವಿಗೆ ಬರಬೇಕು. ಇಲ್ಲವಾದಲ್ಲಿ ನಾವು ಹೋರಾಟಕಿಳಿಯಬೇಕಾಗುತ್ತದೆ ಎಂದು ಉದ್ಯಮಿದಾರ ಶ್ರೀಶೈಲ ಸುತಾರ ಕಿಡಿಕಾರಿದರು.
ಸ್ಥಳಿಯ ಮುಖಂಡರು ಮಾತನಾಡಿ ಮಹಾಸಭಾ ಮತ್ತು ತಾಲೂಕು ಶಾಸಕರು ಬಡವ ಮಲ್ಲಿನಾಥನ ಕಷ್ಟಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು. ಮಹಾಸಭಾದ ಪದಾಧಿಕಾರಿಗಳು, ಪ್ರಮುಖರಾದ ಮೋನಪ್ಪ ಸುತಾರ, ಅಪ್ಪು ಗೋಪಾಳೆ, ಸೋಮಶೇಖರ ಕಾಂಬಳೆ, ಸಂಜಯ ಭೊಸಲೆ, ಶಿವಾನಂದ ಸುತಾರ ಹಾಗೂ ಗ್ರಾಮದ ಹಿರಿಯರು ಮುಂತಾದವರು ಉಪಸ್ಥಿತರಿದ್ದರು.