
ಕಲಬುರಗಿ:ಎಸ್‍ಐಆರ್ ಎಂಬ ಅಸಾಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ, ದುರುದ್ದೇಶಪೂರಿತ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿ ಎಸ್‍ಐಆರ್ ವಿರೋಧಿ ಜ್ಯಾತ್ಯಾತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಲಾಯಿತು. ಭೀಮರಾವ ಟಿ.ಟಿ., ಸುನೀಲ ಮಾನ್ಪಡೆ, ಚಂದ್ರಿಕಾ ಪರಮೇಶ್ವರ, ರೇಣುಕಾ ಸಿಂಗೆ, ಮೈಲಾರಿ ದೊಡ್ಡಮನಿ, ಅಬ್ದುಲ್ ಖಾದರ್, ಶೇಖರ್ ಸಿಂಗ್, ಸಲಿಂ ಅಹ್ಮದ್, ಅನುರಾಧಾ, ಬಾಲಾಜಿ ಕಾಂಬಳೆ, ಸಂಗೀತಾ ಸೇರಿದಂತೆ ಮತ್ತಿತರರು ಇದ್ದರು.
























