
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.೧೩ : “ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳ ಅಧಿಸೂಚನೆ”- ಭಾರತ ದೇಶದ ದುಡಿಯುವ ವರ್ಗದ ವಿರುದ್ಧ ಬಿಜೆಪಿ ಸರ್ಕಾರದ ವಂಚನೆ ಖಂಡಿಸಿ ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಸಮಿತಿ ಕರೆ ನೀಡಿದ ಹಿನ್ನೆಲೆ ಕಾರ್ಮಿಕ ಬಿಲ್ಗಳನ್ನು ದಹಿಸುವ ಮೂಲಕ ಕೂಡಲೇ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕೆAದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡÀ ಲಕ್ಷö್ಮಣ ಹಂದ್ರಾಳ ಮಾತನಾಡಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ನವೆಂಬರ್ ೨೧, ೨೦೨೫ರಂದು ನಾಲ್ಕು “ಕಾರ್ಮಿಕ ಸಂಹಿತೆಗಳ’ ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟನೆಯನ್ನು ಕೇಂದ್ರದ ಎನ್ಡಿಎ ಸರ್ಕಾರ ಮಾಡಿದೆ. ಬಿಹಾರ ರಾಜ್ಯದಲ್ಲಿನ ವಿಧಾನ ಸಭಾ ಚುನಾವಣೆಗಳ ಗೆಲುವಿನ ಅಹಂಕಾರದೊAದಿಗೆ ಈ ವಂಚನೆಯನ್ನು ಬಿಜೆಪಿ ಪಕ್ಷದ ನೇತ್ರತ್ವದಲ್ಲಿನ ಕೇಂದ್ರದ ಎನ್ಡಿಎ ಸರ್ಕಾರ ಮಾಡಿದೆ. ಈ ನಾಲ್ಕು ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಂತಿಮ ಪ್ರಕಟಣೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬರಲಿಲ್ಲ. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ, ದಿನಾಂಕ ೦೮.೦೫.೨೦೨೬ರಂದು ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಈಗ ಐದು ರಾಜ್ಯಗಳ ಚುನಾವಣೆಗಳ ಪಲಿತಾಂಶ ಪ್ರಕಟವಾಗಿದೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊAದಿಗೆ ಈ ಕಪಟ ಹಾಗು ವಂಚನೆಯನ್ನು ಕೇಂದ್ರ ಸರ್ಕಾರ ದೇಶದ ಕಾರ್ಮಿಕ ವರ್ಗದ ವಿರುದ್ಧ ಮಾಡಿದೆ ಎಂದು ಟೀಕಿಸಿದರು.
೨೦೧೯ರಲ್ಲಿ ವೇತನ ಸಂಹಿತೆ ಜಾರಿಗೊಂಡ ನಂತರ, ತಕ್ಷಣದ ಪ್ರತಿಭಟನೆಗಳು ನಡೆದವು. ಜನವರಿ ೨೦೨೦ರಲ್ಲಿ ಯಶಸ್ವಿ ಅಖಿಲ ಭಾರತ ಮುಷ್ಕರದ ಮೂಲಕ ಪ್ರತಿಭಟನೆ ಮಾಡಲಾಗಿತ್ತು. ೨೦೨೦ರ ಸೆಪ್ಟೆಂಬರ್ನಲ್ಲಿ ಉಳಿದ ಮೂರು ಕಾರ್ಮಿಕ ಸಂಹಿತೆಗಳು (ಕೈಗಾರಿಕಾ ಸಂಬAಧ ಸಂಹಿತೆ. ಸಾಮಾಜಿಕ ಭದ್ರತಾ ಸಂಹಿತೆ, ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿಗತಿ ಸಂಹಿತೆ) ಜಾರಿಗೊಂಡ ತಕ್ಷಣ ಪ್ರತಿಭಟನೆಗಳು ನಡೆದವು. ನವೆಂಬರ್ ೨೬, ೨೦೨೦ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರವು ನಡೆದಿತ್ತು. ಇದಲ್ಲದೆ, ಹಲವಾರು ಜಂಟಿ ಕಾರ್ಯಕ್ರಮಗಳು ನಡೆದವು. ಈ ಸಂಹಿತೆಗಳ ಜಾರಿಯ ವಿರುದ್ಧ ಜುಲೈ ೬, ೨೦೨೫ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ೨೫ ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು. ನವೆಂಬರ್ ೨೦೨೫ರಲ್ಲಿ ನಾಲ್ಕು ಸಂಹಿತೆಗಳ ಜಾರಿಯ ಪ್ರಕಟಣೆಯ ನಂತರವು ಪ್ರತಿಭಟನೆಗಳು ವ್ಯಾಪಕವಾಗಿ ನಡೆದೆವು. ಫೆಬ್ರವರಿ ೧೨,೨೦೨೬ರಲ್ಲಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವು ಯಶಸ್ವಿಯಾಗಿ ನಡದೆದಿದೆ. ಈ ರೀತಿಯಲ್ಲಿ ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ, ಕೂಡಲೇ ಕಾರ್ಮಿಕ ವಿರೋಧಿ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರವು ಹಠಮಾರಿ ಧೋರಣೆಯೊಂದಿಗೆ, ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿಗಳು, ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಲಕ್ಷಿಸದೆ, ಬಂಡವಾಳಶಾಹಿಗಳ ಬೇಡಿಕೆಗಳನ್ನು ಪೂರೈಸಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಇದು ಅತ್ಯಂತ ದೇಶದ್ರೋಹಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಸಹ ಸಂಚಾಲಕ ಸುರೇಶ ಜೀಬಿ ಮಾತನಾಡಿ, ಹಲವಾರು ದಶಕಗಳಿಂದ ಸಮರ ಧೀರ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗೂ ಸವಲತ್ತುಗಳನ್ನು ನಾಶಮಾಡುವ ಕ್ರಮ ಇದಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಹಾಲಿ ಹಾಗೂ ಭಾವಿ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ. ಸಿಐಟಿಯು ಸಂಘಟನೆಯು “ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತವೆ”. “ಈ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ. ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗೂ ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ. ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ. ನಂಬಿಕೆ ಮತ್ತು ಆಕಾಂಕ್ಷೆಗಳನ್ನು ನಂದಿಸಿಬಿಡುತ್ತವೆ’ ಎಂದು ಟೀಕಿಸಿದರು.
ಗಾಢವಾಗುತ್ತಿರುವ ನಿರುದ್ಯೋಗದ ಬಿಕ್ಕಟ್ಟು. ಏರುತ್ತಿರುವ ಹಣದುಬ್ಬರ, ಬೆಲೆ ಏರಿಕೆ ಹಾಗೂ ಜೀವನದ ಕಷ್ಟಗಳನ್ನು ದೇಶದ ಜನರು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಭುಗಿಲೆದ್ದ ಕಾರ್ಮಿಕರ ಸ್ವಯಂ ಪ್ರೇರಿತ ಹೋರಾಟದ ಅಲೆಗಳು ಶ್ರಮಜೀವಿಗಳ ಹೊರಹೊಮ್ಮಿದ ಭಾವನೆಗಳಾಗಿವೆ. ಇಂತಹ ಸನ್ನಿವೇಶದಲ್ಲಿ ಈ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು (ರೂಲ್ಸ್) ಅಂತಿಮ ಪ್ರಕಟಣೆ ಮಾಡಿರುವುದು. ದೇಶದ ಸರ್ಕಾರವು ತನ್ನ ಸ್ವಂತ ಪ್ರಜೆಗಳ ಮೇಲೆ ಸಾರಿರುವ ಅಮಾನವೀಯ ಯುದ್ಧ ಘೋಷಣೆಗೆ ಸಮನಾದ ಕ್ರಮವಾಗಿದೆ ಎಂದು ಸಿಐಟಿಯು ಟೀಕಿಸುತ್ತದೆ. ಕೇಂದ್ರ ಸರ್ಕಾರದ ಈ ಪ್ರಜಾವಿರೋಧಿ ನಿರ್ಧಾರದ ವಿರುದ್ಧ, ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುನಂದಾ ನಾಯಕ, ಭಾರತಿ ವಾಲಿ, ಸುರೇಖಾ ವಾಗ್ಮೋರೆ, ಲಾಲಅಹಮ್ಮದ ಶೇಖ, ಗೀತಾ ನಾಯಕ, ರಿಜ್ವಾನಾ ಕುರೋಶಿ, ರೇಣುಕಾ ಗುಂಡಪ್ಪನವರ, ಶ್ರೀದೇವಿ ವಗ್ಯಾನವರ, ಮಾಯಪ್ಪ ಪಾಂಡಿಚೇರಿ, ಬಸವರಾಜ ಬಿರಾದಾರ, ರಾಜಕುಮಾರ ವಾಲೀಕಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.























