Home ಸುದ್ದಿ ರಾಷ್ಟ್ರೀಯ ಉರಿಬಿಸಿಲು ಲೆಕ್ಕಿಸದೆ ಹರಿದುಕ್ಕಿದ ಜನಸ್ತೋಮ

ಉರಿಬಿಸಿಲು ಲೆಕ್ಕಿಸದೆ ಹರಿದುಕ್ಕಿದ ಜನಸ್ತೋಮ

ಚಿತ್ರದುರ್ಗ, ಮೇ 9-ಬೇಸಿಗೆ ಕಾಲದಲ್ಲಿ ಜನರು ಮನೆಯಿಂದ ಹೊರ ಬರುವುದೇ ಬಹಳ ಕಷ್ದ. ಅಂತಹದರಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಯಾವ ಬಿಸಿಲಬೇಗೆಯನ್ನು ಲೆಕ್ಕಿಸದೆ ರಾಜ್ಯದ ವಿವಿಧೆಡೆಗಳಿಂದ ಜನಸಾಗರವೇ ಹರಿದು ಬರುತ್ತಿದೆ.


ಚಿತ್ರದುರ್ಗದಲ್ಲಿ ಇಂದಿನ ತಾಪಮಾನ 39 ಡಿಗ್ರಿ ಇದ್ದು, ಜನರು ರಸ್ತೆಯಲ್ಲಿ ಕಾಲು ಇಡುವುದೇ ಕಷ್ಟ ಅನ್ನುವಂತಿದೆ. ಇನ್ನೂ ಜನರು ರಸ್ತೆಗೆ ಇಳಿದರೆ ಬಿಸಿಲ ಹಬೆ ಭೂಮಿಗೆ ಬಡಿದು ಜನರ ಮುಖ-ಮೈ ಸುಡುವಂತಿದೆ. ಆದರೂ ಕೂಡ ಜನರು ತಮ್ಮ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಯಾವುದೇ ಚುತಿ ಬರವಾರದು, ಕಾರ್ಯಕ್ರಮ ಯಶಸ್ವಿ ಆಗಬೇಕು ಎಂದು ಜನರು ತಂಡೋಪ ತಂಡವಾಗಿ ಬಂದು ವೇದಿಕೆಯಲ್ಲಿ ಹಾಸಿನರಾಗಿದ್ದು.


ಅದರಂತೆ ಬಂದ ಯಡಿಯೂರಪ್ಪ ಅಭಿಮಾನಿಗಳಿಗೆ ಬಿಸಿಲಬೆಗೆಯಿಂದ ಯಾವುದೇ ತೊಂದರೆ ಆಗಬಾರದು ಎಂದು ಕಾರ್ಯಕ್ರಮ ಆಯೋಜಕರು, ವೇದಿಕೆಯ ಮುಂಭಾಗದ ಹಾಸನಗಳ ಅಕ್ಕಪಕ್ಕದಲ್ಲಿ ಏರ್ ಕೂಲರ್ ಗಳನ್ನು ಹಾಕಿ ಜನರನ್ನು ತುಸು ತಣ್ಣಗಿರುವಂತೆ ಮಾಡಿದ್ದಾರೆ.