Home ಜಿಲ್ಲೆ ಬೆಂಗಳೂರು ಜೀವನ ಶೈಲಿಯಲ್ಲಿ ಬದಲಾವಣೆ ಕಾಣದಿರುವುದು ಸ್ವಯಂಕೃತ ಅಪರಾಧ

ಜೀವನ ಶೈಲಿಯಲ್ಲಿ ಬದಲಾವಣೆ ಕಾಣದಿರುವುದು ಸ್ವಯಂಕೃತ ಅಪರಾಧ

ಕೋಲಾರ,ಮೇ,೮- ಅಧುನಿಕ ಕಾಲಘಟ್ಟದಲ್ಲೂ ಜೀವನ ಶೈಲಿಯಲ್ಲಿ ಯಾವ ಬದಲಾವಣೆ ಕಾಣದೆ ಇರುವುದು ನಮ್ಮ ಸ್ವಯಂಕೃತ ಅಪರಾಧಗಳಿಂದಾಗಿದೆ. ಪರಿಸರದ ಮುಂಜಾಗೃತೆಯ ಚಿಂತನೆ ಇಲ್ಲದೆ ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೊಡಲು ಮುಂದಾದರಂತೆ ಎಂಬ ಗಾದೆಯ ಮಾತಿನಂತಾಗಿದೆ. ಪರಿಸರ ನಿರ್ಲಕ್ಷತೆಯ ಪಾಪ ಪ್ರಜ್ಞೆಯಾಗಿ ಕಾಡುತ್ತಿದ್ದು ನಮ್ಮಗಳದು ಭಸ್ಮಸೂರ ಪಾತ್ರದಂತಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.


ನಗರದ ಪತ್ರಕರ್ತರ ಭವನದಲ್ಲಿ ಮನ್ವಂತರ ಪ್ರಕಾಶನ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಜಯಾ ಉನ್ನತಿ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಆಯೋಜಿಸಿದ್ದ ಜಾಗತಿಕ ತಾಪಮಾನ ಏರಿಕೆಯಿಂದ ಅಗುತ್ತಿರುವ ದುಷ್ಪರಿಣಾಮಗಳ ಕುರಿತು ಜನ ಜಾಗೃತಿಗಾಗಿ ಪತ್ರಕರ್ತರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶ್ರೀಸಾಮಾನ್ಯರ ಬದುಕು ಅಧುನೀಕರಣ, ನಗರೀಕರಣವಾದರೂ ವೈಜ್ಞಾನಿಕವಾದ ರೀತಿಯಲ್ಲಿ ಅಭಿವೃದ್ದಿಯಾಗದಿರುವುದಕ್ಕೆ ಅವಸರದ ತೀರ್ಮಾನಗಳಿಂದಾಗಿ ಪರಿಸರದ ಅಸಮಾತೋಲನಕ್ಕೆ ಕಾರಣವಾಗಿದೆ.ಸೊಕ್ಷ್ಮತೆಗಳನ್ನು ಕಳೆದು ಕೊಂಡಾಗ ಅವಘಾಡಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.


ಕೆರೆಕಟ್ಟೆಗಳ ಮೂಲದಿಂದ ಕೃಷಿ ಅವಲಂಭಿತವಾಗಿತ್ತು ಅದರೆ ಈಗಾ ಕೆರೆಗಳೇ ಕಣ್ಮರೆಯಾಗಿವೆ ಎಂದು ರಾಜಧಾನಿ ಬೆಂಗಳೂರನ್ನು ಉದಾಹರಿಸಿದ ಅವರು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ಹವಾಮಾನದ ಬದಲಾವಣೆಗಳಿಂದ ಕಾಲಕಾಲಕ್ಕೆ ಮಳೆಯಾಗದೆ ಜೂಜಾಟದಂತಾಗಿದೆ. ಒಂದು ಸಣ್ಣ ಮಳೆಯು ಹಲವಾರು ಜೀವಗಳನ್ನು ಬಲಿ ಪಡೆಯುತ್ತಿದೆ ಎಂದು ಇತ್ತೀಚೆನ ಘಟನೆಗಳನ್ನು ನೆನಪಿಸಿ ನೈಸರ್ಗಿಕ ಸವಾಲುಗಳನ್ನು ಎದುರಿಸುವಂತ ಸಾಮಾರ್ಥ್ಯ ಇಂದು ಮಾನವನಿಗಿಲ್ಲವಾಗಿದೆ ಎಂದು ತಿಳಿಸಿದರು.


ಮಾನವನ ದುರಾಸೆಗಳಿಂದ ನೈಸರ್ಗಿಕ ಹೊಂದಿ ಕೊಳ್ಳಲು ಸಾಧ್ಯವಿಲ್ಲ. ನೀರು ಇರುವ ಕಡೆ ಮಾತ್ರ ಮಾನವನ ನಾಗರೀಕತೆ ಸಂಸ್ಕೃತಿಗಳು ಹುಟ್ಟಲು ಸಾಧ್ಯ ಎಂಬುವುದು ಇತಿಹಾಸವು ಸಾಕ್ಷೀಕರಿಸಿದೆ ಎಂದು ಪ್ರತಿಪಾದಿಸಿದರು.


ಸಸಿಗಳ ವಿತರಣೆ ಫ್ಯಾಷನ್-
ನಗರದಲ್ಲಿ ನೀರಿನ ಅದಾಲತ್, ನೀರಿನ ಸೌಲಭ್ಯದ ಅಡಿಟರ್ ನಡೆಸಲು ಚಿಂತಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ನೀರಿನ ಸೌಲಭ್ಯಗಳಿಂದಾಗಿ ದುರ್‍ಬಳಕೆಯಾಗುತ್ತಿರುವುದನ್ನು ನಿಯಂತ್ರಿಸಲು ಕ್ರಮವಹಿಸಲಾಗಿದೆ. ಸಸಿಗಳ ವಿತರಣೆ ಫ್ಯಾಷನ್ ಅಗದೆ, ಸಸಿಗಳ ನೆಡುವಿಕೆ ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ. ಸಸಿಗಳನ್ನು ಮರಗಳಾಗಿ ಬೆಳೆಯುವಂತೆ ನಿರ್ವಹಿಸಿದಾಗ ಮಾತ್ರ ಸಾರ್ಥಕವಾಗುವುದು ಎಂದರು.


ಮಾನವನ ಜವಾಬ್ದಾರಿಯು ಹೆಚ್ಚಿನದಾಗಿದೆ.ಶಿಕ್ಷಣ ಪಡೆದವರು ಮಾತ್ರ ಜ್ಞಾನವಂತರಲ್ಲ, ಬುದ್ದಿವಂತರಲ್ಲ, ಶಿಕ್ಷಣ ಪಡೆಯದೆ ಇರುವವರಲ್ಲೂ ಪ್ರಜ್ಞಾವಂತರು. ಬುದ್ದಿವಂತರು. ಸಂಸ್ಕಾರದ ಜೂತೆಗೆ ಸಾಮಾಜಿಕ ಕಳಕಳಿ ಇರುವಂತ ಸಮಾಜಮುಖಿಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

.