Home ಜಿಲ್ಲೆ ಬೆಂಗಳೂರು ಮಹಿಳೆಯರ ಸಬಲೀಕರಣಕ್ಕೆ ಒತ್ತು

ಮಹಿಳೆಯರ ಸಬಲೀಕರಣಕ್ಕೆ ಒತ್ತು

ಕೋಲಾರ ,೮- ರೋಟರಿ ಸಂಸ್ಥೆ ಸಾಮಾಜ ಮುಖಿ ಕಾರ್ಯಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಪಾತ್ರವನ್ನು ಸಮಾಜದಲ್ಲಿ ನೀಡುತ್ತಿದೆ ಎಂದು ರೋಟರಿ ೩೧೯೧ ಜಿಲ್ಲಾ ಪಾಲಕ ರೋ.. ಬಿ. ಆರ್. ಶ್ರೀಧರ್ ಹೇಳಿದರು.


ತಾಲೂಕಿನ ಕಾಮಧೇನಹಳ್ಳಿ ಗ್ರಾಮದ ಸತ್ಯಮ್ಮ ದೇವಿ ದೇವಾಲಯದ ಆವರಣದಲ್ಲಿ ರೋಟರಿ ಸಂಸ್ಥೆ ಯಿಂದ ಹಸುಗಳನ್ನು ನೊಂದ ಮಹಿಳೆಯರಿಗೆ ವಿತರಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ರೋಟರಿ ಸಂಸ್ಥೆಯಿಂದ ಹಸುಗಳನ್ನು ನೀಡುವ ಉದ್ದೇಶ ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಲಿ ಎಂಬ ಕಾರಣಕ್ಕಾಗಿ ನೀಡಲಾಗುತ್ತಿದೆ ಎಂದರು.


ಹೈನೋಧ್ಯಮ ಕ್ಷೇತ್ರ ಮಹಿಳೆಯರಿಗೆ ಲಾಭದಾಯಕ ವಾದ ಕ್ಷೇತ್ರವಾಗಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಜತೆಯಲ್ಲೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಹೇಳಿದರು.


ರೋಟರಿ ಸಂಸ್ಥೆಯಿಂದ ಮಹಿಳೆಯರಿಗೆ ವಿತರಿಸಿರುವ ಹಸುಗಳ ನಿರ್ವಹಣೆ ಮತ್ತು ವಿಮಾ ಯೋಜನೆಗಳ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ೩೧೯೧ ಜಿಲ್ಲಾ ಕಾರ್ಯದರ್ಶಿ ರವೀಂದ್ರನಾಥ್, ನಾರಾಯಣ, ಕೋಲಾರ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್. ಎಂ
ಚಂದ್ರಶೇಖರ್, ಕಾರ್ಯದರ್ಶಿ ರೋ.ಎಂ. ಪ್ರಭಾಕರ್ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಜಿ. ನಾರಾಯಣಸ್ವಾಮಿ, ನಾಗೇಶ್, ಹಾಗೂ ಅನೇಕ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.