Home ಜಿಲ್ಲೆ ಬೆಂಗಳೂರು ಅಂತರಗಂಗೆ ಅರಣ್ಯಕ್ಕೆ ಕಿಡಿಗೇಡಿಗಳಿಂದ ಬೆಂಕಿ

ಅಂತರಗಂಗೆ ಅರಣ್ಯಕ್ಕೆ ಕಿಡಿಗೇಡಿಗಳಿಂದ ಬೆಂಕಿ

ಕೋಲಾರ,ಮೇ,೮- ನಗರದ ಶತಶೃಂಗ ಶ್ರೇಣಿಯಲ್ಲಿ ದಕ್ಷಿಣಾ ಕಾಶಿಯೆಂದೆ ಖ್ಯಾತಿ ಪಡೆದಿರುವ ಅಂತರಗಂಗೆಯ ಅರಣ್ಯ ಪ್ರದೇಶದಲ್ಲಿದ ಒಣಗಿದ ಗಿಡಮರಗಳಿಗೆ ಹುಲ್ಲು ಕಡ್ಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿರುವ ಅಪಾರ ಪ್ರಮಾಣದ ಕಾಡು ನಾಶವಾಗಿದೆ


ಅಂತರಗಂಗೆ ಪ್ರವಾಸಿ ತಾಣವಾಗಿದ್ದು ಪ್ರತಿನಿತ್ಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅದರೆ ಅಂತಗಂಗೆಗೆ ನಡೆದು ಹೋಗುವ ಮಾರ್ಗ ಮಧ್ಯೆ ಕಿಡಿಗೇಡಿಗಳು ಇಂದು ಬೆಂಕಿ ಹೊತ್ತಿಸುವ ಮೂಲಕ ಪುಂಡಾಟಿಕೆ ಮೆರೆದಿದ್ದಾರೆ. ಇದರಿಂದ ಸುಮಾರು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿ ನಾಶವಾಗಿದೆ.


ಇದರ ಜೂತೆಗೆ ಪ್ರಾಣಿ ಪಕ್ಷಿಗಳು ಸಹ ಬೆಂಕಿಗೆ ಆಹತಿಯಾಗಿ ನಾಶವಾಗಿರುವ ಸಾಧ್ಯತೆಗಳಿದೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಅಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.


ಪದೇ ಪದೇ ಬೇಸಿಗೆ ಸಂದರ್ಭದಲ್ಲಿ ಅಂತರಗಂಗೆ ಬೆಟ್ಟದಲ್ಲಿ ಪುಂಡರು ಪೋಕರಿಗಳಿಂದ ಬೆಂಕಿ ಹಚ್ಚುವಂತ ದುಷ್ಟಕೃತ್ಯಗಳು ನಡೆಯುತ್ತಲೆ ಇರುತ್ತದೆ.


ಇದರ ಮುನ್ನೆಚ್ಚರಿಕೆ ಭಾಗವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಗಸ್ತು ಹಾಕುವ ಮೂಲಕ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ವಹಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.