Home ಮುಖಪುಟ ಸುದ್ದಿ ಅಮೆರಿಕ- ಇರಾನ್ ಯುದ್ಧಾಂತ್ಯಕ್ಕೆ ಕಾಲ ಸನ್ನಿಹಿತ

ಅಮೆರಿಕ- ಇರಾನ್ ಯುದ್ಧಾಂತ್ಯಕ್ಕೆ ಕಾಲ ಸನ್ನಿಹಿತ

ವಾಷಿಂಗ್ಟನ್,ಮೇ.೭- ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ-ಇರಾನ್ ಮುಂದಾಗಿದ್ದು ಯುದ್ದ ಅಂತ್ಯಗೊಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ

ಅಮೆರಿಕ- ಇರಾನ್ ನಡುವೆ ಒಪ್ಪಂದಕ್ಕೆ ಹತ್ತಿರವಾಗಬಹುದು ಎನ್ನುವ ವರದಿ ನಡುವೆಯೂ ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಪ್ರಸ್ತಾಪವನ್ನು “ಇನ್ನೂ ಪರಿಗಣಿಸಲಾಗುತ್ತಿದೆ” ಎಂದು ಇರಾನ್ ಹೇಳಿದೆ.

ಇರಾನ್ ಮುಂದಿಟ್ಟಿರುವ ೧೪ ಅಂಶಗಳ ತಿಳುವಳಿಕೆ ಒಪ್ಪಂದಕ್ಕೆ ಅಮೆರಿಕ ಒಪ್ಪುವ ಸಾಧ್ಯತೆ ಇದೆ, ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಅಮೆರಿಕದ ಪ್ರಸ್ತಾಪವನ್ನು ಇರಾನ್ ತಳ್ಳಿ ಹಾಕಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದ್ದು ಅಮೆರಿಕ- ಇರಾನ್ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ ಪಾಕಿಸ್ತಾನದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದಾಗಿ ಮಾಹಿತಿ ನೀಡಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವರು ಪ್ರತಿಕ್ರಿಯಿಸಿ ಅಮೆರಿಕ- ಇರಾನ್ ನಡುವೆ ಯುದ್ಧ ಕೊನೆ ಗೊಳಿಸುವ ನಿಟ್ಟಿನಲ್ಲಿ ಹಾಗೂ ಶಾಶ್ವತ ಕದನ ವಿರಾಮ ಅಂತ್ಯಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಕಳೆದ ೨೪ ಗಂಟೆಗಳಲ್ಲಿ ಇರಾನ್ ಜೊತೆ ಅಮೆರಿಕ ಉತ್ತಮ ಮಾತುಕತೆ ನಡೆಸಿದೆ” ಎಂದು ಮಾಹಿತಿ ನೀಡಿದ್ದಾರೆ.

ಇರಾನಿನ ಪರಮಾಣು ಪುಷ್ಟೀಕರಣದ ಮೇಲಿನ ಅಮಾನತು, ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಉಚಿತ ಸಾಗಣೆ ಪುನಃಸ್ಥಾಪಿಸುವುದು ಸೇರಿದಂತೆ ಹಲವು ವಿಷಯಗಳಿವೆ ಎನ್ನಲಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಸ್ಥಿಕೆಯ ಕುರಿತು ವಿವರಿಸಿದ ಎರಡು ಮೂಲಗಳು “ಅಮೆರಿಕನ್ ಪ್ರಸ್ತಾವನೆಯನ್ನು ಇನ್ನೂ ಇರಾನ್ ಪರಿಶೀಲಿಸುತ್ತಿದೆ. ಆ ನಂತರವೇ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಝಾಯಿ ಪ್ರತಿಕ್ರಿಯಿಸಿ “ಅಮೆರಿಕದ ಜೊತೆಗೆ ಮುಖಾ ಮುಖಿ ಮಾತುಕತೆ ನಡೆಸದೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದು ಎಂದಿದ್ದಾರೆ.