
ಧಾರವಾಡ,ಮೇ.೩: ಪ್ರತ್ಯೇಕ ಮಹಾನಗರ ಪಾಲಿಕೆ ವಿಚಾರದಲ್ಲಿ ಬಿಜೆಪಿ ನಾಯಕರು ದ್ವಂದ್ವ ನೀತಿ ಅನುಸರಿಸುವ ಮೂಲಕ ಧಾರವಾಡದ ಜನತೆಗೆ ದ್ರೋಹ ಬಗೆದಿದ್ದಾರೆ,” ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಏಗನಗೌಡರ ದೂರಿದ್ದಾರೆ.
ಹಿಂದೆ ಇದೇ ಬಿಜೆಪಿ ನಾಯಕರು “ಪ್ರತ್ಯೇಕ ಪಾಲಿಕೆ ಮಾಡಿದ್ದು ನಾವೇ” ಎಂದು ಬೆನ್ನು ತಟ್ಟಿಕೊಳ್ಳುತ್ತಾ ಇಡೀ ನಗರದಾದ್ಯಂತ ಬ್ಯಾನರ್ ಹಚ್ಚಿ ಪ್ರಚಾರ ಪಡೆದಿದ್ದರು.
“ಅಂದು ಪ್ರಚಾರಕ್ಕಾಗಿ ಬ್ಯಾನರ್ ಹಚ್ಚಿದ ಬಿಜೆಪಿಗರಿಗೆ ಇಂದು ಆ ಬೇಡಿಕೆಯನ್ನು ಅನುಷ್ಠಾನಕ್ಕೆ ತರಲು ಯಾಕೆ ಸಾಧ್ಯವಾಗುತ್ತಿಲ್ಲ?”
“ಅಧಿಕಾರದಲ್ಲಿದ್ದಾಗ ಒಂದು ಮಾತು, ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ಮಾತು ಹೇಳುವ ಇವರಿಗೆ ಯಾವ ನೈತಿಕತೆ ಇದೆ?” ಎಂದು ಏಗನಗೌಡರ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ಧಾರವಾಡದ ಅಭಿವೃದ್ಧಿ ವಿರೋಧಿಗಳು ಎಂಬುದು ಈಗ ಸಾಬೀತಾಗಿದೆ. ಜನರ ಭಾವನೆಗಳ ಜೊತೆ ಆಟವಾಡುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
.

























