Home ಜಿಲ್ಲೆ ಕಲಬುರಗಿ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕøತ ಸಮದ್ ಪಟೇಲ್ ಅವರಿಗೆ ಸನ್ಮಾನ

ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕøತ ಸಮದ್ ಪಟೇಲ್ ಅವರಿಗೆ ಸನ್ಮಾನ

ಕಲಬುರಗಿ,ಏ.29-ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಕೆಸಿಸಿಐ) , ಕಲಬುರಗಿ ಅಗ್ರೊ ಇನ್‍ಪುಟ್ ಡೀಲರ್ಸ್ ಅಸೋಸಿಯೇಶನ್ ಹಾಗೂ ಎಲ್ಲಾ ತಾಲೂಕುಗಳ ಅಗ್ರೊ ಇನ್‍ಪುಟ್ ಡೀಲರ್ಸ್ ಸಂಘಗಳ ಸಹಯೋಗದಲ್ಲಿ “ಕಾಯಕ ನಿಷ್ಠ ಸನ್ಮಾನ ಸಮಾರಂಭ” ಕಾರ್ಯಕ್ರಮವನ್ನು ಆಯೋಜಿಸಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸಮದ್ ಪಟೇಲ್ ಅವರಿಗÉ 2026ನೇ ಸಾಲಿನ “ಸುವರ್ಣ ಕನ್ನಡಿಗ ಪ್ರಶಸ್ತಿ” ಲಭಿಸಿದ ಹಿನ್ನÉಲೆಯಲ್ಲಿ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವು ಬಬಲಾದ ಮಠದ ಗುರುಪಾದಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅಫಜಲ್ಪುರ ತಾಲೂಕಿನ ಚಿನಮಗÉರÉ ಮಠದ ಸಿದ್ದರಾಮ ಶಿವಯೋಗಿಗಳವರ ಆಶೀರ್ವಾದದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದರಾಮಪ್ಪ ಪಾಟೀಲ್ ಧಂಗಾಪುರ ಹಾಗೂ ಕಲಬುರಗಿ ಅಗ್ರೊ ಇನ್‍ಪುಟ್ ಡೀಲರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಅಂಕುಶ್ ಶಾ ಭಾಗವಹಿಸಿದರು.
ಕೆಕೆಸಿಸಿಐ ಅಧ್ಯಕ್ಷರಾದ ಶರಣಬಸಪ್ಪ ಎಂ. ಪಪ್ಪ, ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶÉಟ್ಟಿ, ಸದಸ್ಯರಾದ ರಾಜಶೇಖರ ದುಕಾನ್‍ದಾರ್, ಅಗ್ರೊ ಇನ್‍ಪುಟ್ ಡೀಲರ್ಸ್ ಸಂಘದ ಅಧ್ಯಕ್ಷರಾದ ಬಸವರಾಜ್ ಮಂಗಲಗಿ ಹಾಗೂ ಜಿಲ್ಲಾ ಅಗ್ರೊ ಇನ್‍ಪುಟ್ ಡೀಲರ್ಸ್ ಅಧ್ಯಕ್ಷರಾದ ಚಂದ್ರಶೇಖರ್ ತಳ್ಳಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ರೈತ ಗೀತೆಯೊಂದಿಗÉ ಪ್ರಾರಂಭವಾಗಿ, ಸಸಿ ನೆಡುವ ಮೂಲಕ ಉದ್ಘಾಟಿಸಲಾಯಿತು. ಅಗ್ರೊ ಇನ್‍ಪುಟ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಬಸವರಾಜ್ ಮಂಗಲಗಿ ಸ್ವಾಗತಿಸಿದರು.
ಸಮದ್ ಪಟೇಲ್ ಅವರ ಜೀವನ ಸಾಧನೆಗಳನ್ನು ವೀಡಿಯೋ ಪ್ರದರ್ಶನದ ಮೂಲಕ ಪರಿಚಯಿಸಿ, ಬಳಿಕ ಕೆಕೆಸಿಸಿಐ, ಅಗ್ರೊ ಡೀಲರ್ಸ್ ಸಂಘಗಳು ಹಾಗೂ ಕೃಷಿ ಸಾಧಕರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕøತರಿಗೂ ಸನ್ಮಾನ ಮಾಡಲಾಯಿತು.
ಚಿನಮಗÉರÉ ಮಠದ ಸಿದ್ದರಾಮ ಶಿವಯೋಗಿಗಳು ಮಾತನಾಡಿ, “ಕೃಷಿ ಜೀವನವೇ ಆರೋಗ್ಯಕರ ಜೀವನಕ್ಕÉ ಮೂಲ. ನಾನು 98 ವರ್ಷ ವಯಸ್ಸಿನವನಾಗಿದ್ದರೂ ಕೃಷಿಯಲ್ಲೇ ತೊಡಗಿಸಿಕೊಂಡಿರುವುದು ಅದರ ಮಹತ್ವವನ್ನು ತೋರಿಸುತ್ತದೆ. ‘ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ’ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್‍ಳಬೇಕು” ಎಂದು ಆಶೀರ್ವಚನ ನೀಡಿದರು. ವ್ಯಾಪಾರದಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದರಾಮಪ್ಪ ಪಾಟೀಲ್ ಮಾತನಾಡಿ, ಚಿನಮಗÉರÉ ಸ್ವಾಮೀಜಿ ಸ್ವತಃ ಕೃಷಿಕರಾಗಿದ್ದು, ಕೃಷಿಯೊಂದಿಗಿನ ನಂಟನ್ನು ಉಳಿಸಿಕೊಂಡಿದ್ದಾರÉ ಎಂದರು. ” ಸಮದ್ ಪಟೇಲ್ ಕೃಷಿ ಪಂಡಿತರಾದರೂ ಅವರಿಗÉ ಸರ್ಕಾರದ ಹೆಚ್ಚಿನ ಸಹಕಾರ ಅಗತ್ಯವಿದೆ. ಅಗ್ರೊ ಡೀಲರ್ಸ್ ಗಳು ರೈತರಿಗÉ ಕೆಳಮಟ್ಟದ (ಸಬ್‍ಸ್ಟ್‍ಯಾಂಡರ್ಡ್) ಬೀಜಗಳನ್ನು ಮಾರಬಾರದು” ಎಂದು ಹೇಳಿದರು. ಅಧಿಕಾರಿಗಳಿಗÉ ಸನ್ಮಾನ ಮಾಡಿರುವುದು ಇದೇ ಮೊದಲ ಬಾರಿಗÉ ಕಾಣಿಸುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು, ಅಗ್ರೊ ಡೀಲರ್ಸ್ ಹಾಗೂ ಕೆಕೆಸಿಸಿಐಗÉ ಧನ್ಯವಾದಗಳನ್ನು ಸಲ್ಲಿಸಿದರು. ಕೃಷಿಕ ಸಮಾಜದಿಂದ ಕೃಷಿ ಪಂಡಿತರಿಗÉ ಅಭಿನಂದನೆಗಳನ್ನು ಸಲ್ಲಿಸಿದರು.
“ಬ್ಯೂರೋಕ್ರಾಟ್ಸ್‍ಗಳಿಗÉ ತಮ್ಮ ಕೆಲಸದಲ್ಲಿ ಮಿತಿಗಳಿದ್ದರೂ, ನಾವು ಅವರನ್ನು ದೋಷಾರೋಪಣÉ ಮಾಡುವುದಿಲ್ಲ. ಆದರೂ ಸಮದ್ ಪಟೇಲ್ ಅವರು ಆ ಮಿತಿಗಳನ್ನು ಮೀರಿ ರೈತರ ಹಿತಕ್ಕಾಗಿ ಕೆಲಸ ಮಾಡಿದ್ದಾರÉ” ಎಂದು ಪ್ರಶಂಸಿಸಿದರು.
ಕೆಕೆಸಿಸಿಐ ಅಧ್ಯಕ್ಷರಾದ ಶರಣಬಸಪ್ಪ ಪಪ್ಪ ಮಾತನಾಡಿ, ” ಸಮದ್ ಪಟೇಲ್ ಅವರು ಜಿಲ್ಲÉಯ ರೈತರಿಗÉ ಉತ್ತಮ ಸೇವೆ ಸಲ್ಲಿಸುತ್ತಿದ್ದಾರÉ. ಕೆಕೆಸಿಸಿಐ ಕೃಷಿ ಜಾತ್ರÉ ಯಶಸ್ವಿಗÉ ಅವರು ನೀಡಿದ ಸಹಕಾರ ಅಮೂಲ್ಯ.
ಕಲಬುರಗಿ ಪ್ರದೇಶದಲ್ಲಿ ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ ಸ್‍ಥಾಪನೆಯಾಗುತ್ತಿರುವುದು ರೈತರು ಹಾಗೂ ಉದ್ಯಮಿಗಳಿಗÉ ಉಪಯುಕ್ತವಾಗಲಿದೆ. ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಕೆಕೆಸಿಸಿಐ
ಸರ್ಕಾರದೊಂದಿಗÉ ನಿರಂತರವಾಗಿ ಹೋರಾಟ ಮಾಡುತ್ತಿದೆ” ಎಂದು ಹೇಳಿದರು. ಈ ವರ್ಷ ಕೆಕೆಸಿಸಿಐಯು ಎಂಎಸ್‍ಎಂಇ ಪ್ರದರ್ಶನ ಆಯೋಜಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.
ಸನ್ಮಾನಿತರಾದ ಸಮದ್ ಪಟೇಲ್ ಮಾತನಾಡಿ, “ಭಾರತದ 60% ಜನರು ಕೃಷಿಗÉ ಅವಲಂಬಿತರಿದ್ದಾರÉ. ಕೃಷಿಯ ಬÉಳವಣಿಗÉಯೇ ದೇಶದ ಪ್ರಗತಿಗÉ ಕಾರಣ. ನನ್ನ ಸೇವಾ ಅವಧಿಯಲ್ಲಿ ರೋಟಾವೇಟರ್ ಬಳಕೆ ಹಾಗೂ ಸಾವಯವ ಕೃಷಿಯನ್ನು ಪರಿಚಯಿಸಿದ್ದೇವೆ. ರೈತರೊಂದಿಗÉ ನೇರ ಸಂಪರ್ಕದಿಂದ ಸಮಸ್ಯೆಗಳಿಗÉ ಪರಿಹಾರ ಕಂಡುಕೊಂಡಿದ್ದೇನೆ. ನಮ್ಮ ಪ್ರದೇಶ ಬರ ಅಥವಾ ಪ್ರವಾಹಕ್ಕÉ ಹೆಸರಾಗಿದ್ದು, ಆ ಸಂದರ್ಭದಲ್ಲಿ ರೈತರ ಜೊತೆ ನಿಂತು ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಕಲಬುರಗಿ ರೊಟ್ಟಿ ಬ್ರ್ಯಾಂಡ್ ಅಭಿವೃದ್ಧಿಯಲ್ಲಿ ಸಹ ಭಾಗಿಯಾಗಿದ್ದು, ಇಂದು ಅದು ವಿದೇಶಗಳಿಗೂ ರಫ್ತು ಆಗುತ್ತಿದೆ ಹಾಗೂ ಪ್ರಧಾನಮಂತ್ರಿಗಳ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲೂ ಪ್ರಸ್ತಾಪವಾಗಿದೆ. ಡ್ರೋನ್ ಸ್ಪ್ರೆಯಿಂಗ್ ತಂತ್ರಜ್ಞಾನವನ್ನು ಪರಿಚಯಿಸಲು 14 ಡ್ರೋನ್‍ಗಳನ್ನು ಖರೀದಿಸಲಾಗಿದೆ” ಎಂದು ತಿಳಿಸಿದರು.
ಅಗ್ರೊ ಡೀಲರ್ಸ್‍ಗಳು ತಮ್ಮ ಜ್ಞಾನವನ್ನು ನವೀಕರಿಸಿಕೊಂಡು, ರೈತರಿಗÉ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ನಂತರ “ಕಿಸಾನ್ ತಂತ್ರಾಂಶ” ಕುರಿತು ತಾಂತ್ರಿಕ
ಅಧಿವೇಶನವೂ ನಡೆಯಿತು.