
ಕಲಬುರಗಿ,ಏ.29: ನಗರದ ಸೋನಿಯಾ ಗಾಂಧಿ ಕಾಲೋನಿ ಬಡಾವಣೆಯಲ್ಲಿ ದೈಹಿಕ ವಿಕಲಚೇತನರು ಮತ್ತು ಬುದ್ದಿಮಾಂಧ್ಯ ಮಗುವಿನ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಂಗವಿಕಲ ಇಲಾಖೆಯ ಕಲ್ಯಾಣ ಅಧಿಕಾರಿ ಸಾದಿಕ್ ಹುಸೇನ್ ಅವರು ಮನೆಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ಈ ವೇಳೆ ಅಂಗವಿಕಲರಿಗೆ ಸಕಾ9ರದ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಬುದ್ದಿಮಾಂದ್ಯ ಮಗುವಿಗೆ ಇಲಾಖಾವತಿಯಿಂದ ಪ್ರತಿ ತಿಂಗಳು ಆರೈಕೆದಾರರ ಭತ್ಯೆ ರೂ.1000 ನೀಡುವ ಯೋಜನೆಯಡಿ ಅಜಿ9 ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಮನೆಯಲ್ಲೇ ವಾಸವಾಗಿದ್ದ ದೈಹಿಕ ವಿಕಲಚೇತನ ವ್ಯಕ್ತಿಗೆ ಓಡಾಡಲು ಅನುಕೂಲಕರವಾಗುವಂತೆ ಸ್ಥಳದಲ್ಲಿಯೇ ಡಿ.ಡಿ.ಆರ್.ಸಿ ವತಿಯಿಂದ ತ್ರಿಚಕ್ರ ಸೈಕಲ್ ವಿತರಿಸಲು ಕ್ರಮವಹಿಸಲಾಯಿತು. ಅಧಿಕಾರಿಗಳ ಕಾಳಜಿಗೆ ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಕಾಲೋನಿಯ ನಿವಾಸಿ ಕಮಿಟಿ ಮುಖಂಡ ಬಾಬಾ ಹುಸೇನ್, ಹಸನ್ ಅಲಿ ಸೇರಿದಂತೆ ಮುಂತಾದವರು ಇದ್ದರು.






















