Home ಜಿಲ್ಲೆ ಮೀಸಲಾತಿ, ಭೂ ಸುಧಾರಣೆಗಳು ಸಾಮಾಜಿಕ ನ್ಯಾಯದ ಎರಡು ಪರಿಕಲ್ಪನೆಗಳು: ಪ್ರೊ ;ಬಸವರಾಜ ಜಾಲವಾದಿ

ಮೀಸಲಾತಿ, ಭೂ ಸುಧಾರಣೆಗಳು ಸಾಮಾಜಿಕ ನ್ಯಾಯದ ಎರಡು ಪರಿಕಲ್ಪನೆಗಳು: ಪ್ರೊ ;ಬಸವರಾಜ ಜಾಲವಾದಿ

ಕೊಲ್ಹಾರ;ಏ.29:ಅಂಬೇಡ್ಕರರ ಆರಂಭದ ದಿನಗಳಲ್ಲಿ ಅವರೆಲ್ಲಾ ಹೋರಾಟವು ಹಿಂದುಳಿದ ವರ್ಗದವರಿಗೆ ಮೀಸಲಾಗಿತ್ತು ಏಕೆಂದರೆ ಭೂ ಸುಧಾರಣೆ ಮತ್ತು ಮೀಸಲಾತಿ ಸಾಮಾಜಿಕ ನ್ಯಾಯದ ಎರಡು ಪರಿಕಲ್ಪನೆಗಳು ಎಂಬುವುದು ಅಂಬೇಡ್ಕರ್ ಅವರಿಗೆ ಚೆನ್ನಾಗಿ ಗೊತ್ತಿತ್ತು ಎಂದು ವಿಜಯಪುರದ ಪ್ರಗತಿಪರ ಚಿಂತಕ ಪೆÇ್ರ.ಪಿ.ಬಸವರಾಜ ಜಾಲವಾದಿ ಹೇಳಿದರು.

ಅವರು ನಿನ್ನೆ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ , ಮತ್ತು ಭಾರತರತ್ನ ಡಾಪಿ ಬಿ ಆರ್ ಅಂಬೇಡ್ಕರ್ ವಿದ್ಯಾಚೇತನ ಯುವಕ ಸಂಘ ಮಸೂತಿ ಇವರ ಸಹಯೋಗದಲ್ಲಿ ನಡೆದ ಭಾರತರತ್ನ ಡಾಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಮಾತು ಮುಂದುವರಿಸಿದ ಅವರು ಮೀಸಲಾತಿಗೆ ಮೂಲವಾಗಿರುವ 340ನೇ ಕಲಮನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವುದರ ಮೂಲಕ ವಿಶೇಷವಾಗಿ ಬಿ.ಪಿ ಮಂಡಲ ಆಯೋಗದ ಮೂಲಕ obಛಿಗಳಿಗೆ ಮೀಸಲಾತಿ ದೊರಕುವಂತೆ ಮಾಡಿದವರು. ಅಂಬೇಡ್ಕರ್ ಈ ಮೊದಲು ಕಾಕಸಾಹೇಬ್ ಕಾಲೇಲ್ಕರ್ ಆಯೋಗ ರಚನೆಗೆ ಮೂಲ ಕಾರಣೀಕರ್ತರೇ ಅಂಬೇಡ್ಕರರೆಂಬುದನ್ನು ಓಬಿಸಿ ಜನಾಂಗದವರು ಎಂದೂ ಮರೆಯಬಾರದು. ಹಾಗೂ ಯಾವ ಬಿ.ಪಿ ಮಂಡಲ ಆಯೋಗದಿಂದ ಇಡೀ ಒಬಿಸಿ ಜನಾಂಗಕ್ಕೆ ಮೀಸಲಾತಿ ದೊರಕುವುದಿತ್ತೋ ಪ್ರಜ್ಞೆ ಇಲ್ಲದೆ ಅದನ್ನು ವಿರೋಧಿಸಿದವರು ಇದೇ ಓಬಿಸಿಗಳು.ಅದರೆ…ಅದರ ಪರ ನಿಂತು ಬಿಪಿ ಮಂಡಲ್ ಆಯೋಗದ ಮೂಲಕ ಓಬಿಸಿ ಗಳಿಗೆ ಮೀಸಲಾತಿ ಕೊಡಬೇಕೆಂದು ಗಟ್ಟಿಯಾಗಿ ನಿಂತವರು ದಲಿತರು. ಹಿಂದುಳಿದವರು ಅದನ್ನು ವಿರೋಧಿಸಿ ಭಾರತದಾದ್ಯಾಂತ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ ಮಧ್ಯಪ್ರದೇಶದಲ್ಲಿ ಹೋರಾಟ ಮಾಡಿದ ಉದಾಹರಣೆ ಇದೆ.
ಮಸೂತಿಯ ಕೆ. ಬಿ. ಎಲ್ .ಪಿ .ಎಸ್ .ನ ಜನತಾ ಕಾಲೋನಿಯ ಶಿಕ್ಷಕ ಶಂಕರ್ ಹೆಚ್. ಬರಗಿ ಮಾತನಾಡಿ, ಜಾತೀಯ ಕಾರಣದಿಂದ ಮಾತ್ರ ಅಂಬೇಡ್ಕರರನ್ನು ಹೊರಗಿಟ್ಟ ನಮ್ಮ ಓಬಿಸಿ ಸಮಾಜ ಇಂದು ಪಶ್ಚಾತಾಪ ಪಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಅಂಬೇಡ್ಕರರ ಜಯಂತಿಯನ್ನು ಊರ ಗಣ್ಯರ ಸಮ್ಮುಖದಲ್ಲಿ ಆಚರಿಸುವ ಮೂಲಕ ಅವರ ಮನುಷ್ಯಪರ ಕಾಳಜಿಯನ್ನ ಇಡೀ ದೇಶಕ್ಕೆ ಮುಟ್ಟಿಸುವುದು ನಮ್ಮ ಜವಾಬ್ದಾರಿಯಾಗಬೇಕು ಎಂದರು.

ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಕೆ. ಎಸ್. ಐ. ಎಸ್ .ಎಫ್ ಜೋಗ್ ನ ಅನಿಲ್ ಕುಮಾರ್ ದೊಡಮನಿ ಮಾತನಾಡಿ,
ಇವತ್ತಿಗೂ ಅಸ್ಪೃಶ್ಯತೆ ತಾಂಡವ ವಾಡುತ್ತಿರುವುದನ್ನು ನೋಡಿದರೆ ಭಾರತೀಯ ಮೇಲ್ವರ್ಗದ ಮನಸ್ಸುಗಳು ಮನುಷ್ಯರನ್ನು ಹಾಗೂ ದೇಶವನ್ನು ಕಡೆಗಣಿಸಿದ್ದಾರೆ ಎಂಬುದು ಸಾಬೀತಾಗುತ್ತದೆ. ಅಂಬೇಡ್ಕರ್ ಅವರ ವಿಚಾರಧಾರೆಗಳೆಲ್ಲ ತಳ ಸಮುದಾಯದ ಹಿಂದುಳಿದ, ದಲಿತ ,ಮಹಿಳೆ ಹಾಗೂ ಕಾರ್ಮಿಕರ ಪರವಾಗಿಯೇ ಇದ್ದವು ಎಂದರು.
ವೇದಿಕೆಯ ಮೇಲೆ ಸಂತೋಷ ಗಣಾಚಾರಿ, ಎಚ್.ಎಸ್ ಘರಸಂಗಿ, ಶಂಕರ್ ಬರಗಿ ಎಸ್ ಕೆ .ಹಂಗರಗಿ, ಸಂತೋಷ ಚನಗೊಂಡ,
ಬಿ.ಜಿ.ಬಿಸ್ಟಗೊಂಡ, ಈರಣ್ಣ ತಳವಾರ, ರಾಜು ಬೆಸ್ಟಗೊಂಡ, ಚಂದಪ್ಪ ತಳವಾರ್, ಸಿಪಿ ಪಾಟೀಲ, ಬಿ.ಎ ಪಾಟಿಲ, ಪ್ರಕಾಶ್ ಕಾಗಲ, ಪ್ರಕಾಶ್ ಘರಸಂಗಿ, ಬಸವರಾಜ ಸಾಲಹಳ್ಳಿ ಯಮನಪ್ಪ ತಳವಾರ,ಶ್ರೀಶೈಲ್ ಚಿಮ್ಮಲಗಿ, ಮಲ್ಲು ದಳವಾಯಿ, ಶ್ರೀಶೈಲ್ ಡೆಂಗಿ, ಎಸ್ ಎಸ್ ಗೌರಿಮಠ, ಯಲ್ಲಪ್ಪ ಛಲವಾದಿ, ಬಸವರಾಜ ಚಲವಾದಿ, ರಾಜು ದೊಡ್ಡಮನಿ ಸುನಿಲ್ ಹಾಗೂ ವಿದ್ಯಾಚೇತನ ಯುವಕ ಸಂಘದ ಯುವಕರು ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು.

ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಆಯಿತು ಕಾರ್ಯಕ್ರಮದಲ್ಲಿ ಕ್ರಾಂತಿಗೀತೆಯ ಮೂಲಕ ಸ್ವಾಗತಿಸಲಾಯಿತು, ಶ್ರೀ ನವೀನ್ ಸಾಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಕೀಲ ಅನಿಲಕುಮಾರ ವಂದನಾರ್ಪಣೆ ಮಾಡಿದರು.