
೨ನೇ ಹಂತದ ಮತ ಸಂಭ್ರಮ
ಕೊಲ್ಕತ್ತಾ, ಏ. ೨೯- ತೀವ್ರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಮತದಾನ ಆರಂಭವಾದ ಕೆಲ ಹೊತ್ತಲ್ಲೇ ಛಾಪ್ರಾ, ಶಾಂತಿಪುರ, ನಿಮ್ತಾಲಾ ಮತ್ತು ಭಾಂಗಾರ್ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ವಶ ಪಡೆಯುವ ಯತ್ನದ ವೇಳೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘೋಷಣೆ ನಡೆದಿದ್ದು, ೧೨ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಮತಗಟ್ಟೆ ಕೇಂದ್ರಗಳಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಾಡಿಯಾ ಜಿಲ್ಲೆಯ ಛಾಪ್ರಾದಲ್ಲಿರುವ ಬೂತ್ ಸಂಖ್ಯೆ ೫೩ರಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆನಡೆಸಿದ್ದಾರೆ. ೧೫ ರಿಂದ ೧೬ ಮಂದಿ ಟಿಎಂಸಿ ಕಾರ್ಯಕರ್ತರು ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಓರ್ವ ಕಾರ್ಯಕರ್ತನ ಕೈಯಲ್ಲಿ ಬಂದೂಕು ಇತ್ತು ಎಂದು ಗಾಯಾಳು ವ್ಯಕ್ತಿ ತಿಳಿಸಿದ್ದಾರೆ.
ಶಾಂತಿಪುರದಲ್ಲಿ ವಾರ್ಡ್ ೧೬ರಲ್ಲಿ ಬಿಜೆಪಿಯ ಕ್ಯಾಂಪ್ ಕಚೇರಿಯ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಹಲವೆಡೆ ಹಿಂಸಾಚಾರದ ನಡುವೆ ೧೪೨ ಕ್ಷೇತ್ರಗಳಿಗೆ ನಡೆಯುತ್ತಿರುವ ಎರಡನೆ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಶಾಂತಿಯುತ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಹಿಂಸಾಚಾರ ಗದ್ದಲ, ಗಲಾಟೆ, ಬಿಗುವಿನ ವಾತವಾರಣದ ನಡುವೆಯೇ ಮಧ್ಯಾಹ್ನದ ವೇಳೆಗೆ ಶೇಕಡಾ ೫೫ಕ್ಕೂ ಅಧಿಕ ಪ್ರಮಾಣದಲ್ಲಿ ಮತದಾನವಾಗಿದ್ದು ಸಂಜೆಯ ವೇಳೆಗೆ ಮತ್ತಷ್ಟು ಮತದಾನದ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ.
ಎಂಟಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಿಯಾನಾ ತಿಬ್ರೆವಾಲ್ ಪ್ರತಿನಿಧಿಯನ್ನು ಮತಗಟ್ಟೆಯಿಂದ ಹೊರಹಾಕಿದ ನಂತರ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ, ಇದರು ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಗದ್ದಲ ಕೋಲಾಹಲಕ್ಕೆ ಕಾರಣವಾಗಿದ್ದು ಹಲವು ಕಡೆ ಹಿಂಸಾಚಾರ ಸ್ವರೂಪ ಪಡೆಡುಕೊಂಡಿದೆ.
ಆಡಳಿತಾರೂಢ ಟಿಎಂಸಿ ಪಕ್ಷದಿಂದ ಅಧಿಕಾರ ಕಸಿದುಕೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಮಾಡಬೇಕು ಎನ್ನುವ ಉತ್ಸಾಹದಲ್ಲಿರುವ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಅದಕ್ಕೆ ಟಿಎಂಸಿಯೂ ಕೂಡ ತಿರುಗೇಟು ನೀಡಿದೆ, ಇದರಿಂದ ಆರೋಪ ಪ್ರತ್ಯಾರೋಪ ನಡೆದು ಹಿಂಸಾಚಾರ ಹೆಚ್ಚಾಗುವಂತೆ ಮಾಡಿದೆ.
ಕೆಲವು ಮತಗಟ್ಟೆ ತುಂಬಾ ಚಿಕ್ಕದಾಗಿದ್ದರಿಂದ ಏಜೆಂಟ್ ಅನ್ನು ಹೊರಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಆ ಸ್ಥಾನಕ್ಕಾಗಿ ತೃಣಮೂಲ ಪಕ್ಷದ ಅಭ್ಯರ್ಥಿಯ ಪ್ರತಿನಿಧಿಯೂ ಜಗಳದಲ್ಲಿ ಸೇರಿಕೊಂಡರು, ನಂತರ ಇಬ್ಬರನ್ನೂ ಹೊರಹೋಗುವಂತೆ ಹೇಳಲಾಯಿತು. ಇದರಿಂದ” ಬಿಜೆಪಿ -ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಛಾಪ್ರಾದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ನಾಡಿಯಾ ಜಿಲ್ಲೆಯ ಛಾಪ್ರಾದಲ್ಲಿರುವ ಮತಗಟ್ಟೆ ೫೩ ರಲ್ಲಿ ತೃಣಮೂಲ ಪಕ್ಷದ ಮತ್ತೊಬ್ಬ ಏಜೆಂಟ್ ಮೇಲೆ ತೃಣಮೂಲ ಪಕ್ಷದ ನಟ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಓರ್ವ ಏಜೆಂಟ್ – ಮೊಶರೆಫ್ ಮಿರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಡಜನ್ಗೂ ಹೆಚ್ಚು ತೃಣಮೂಲ ಕಾರ್ಯಕರ್ತರು ಗಾಯಗೊಂಡಿದ್ದಾರೆ ಅವರಲ್ಲಿ ಒಬ್ಬರ ಬಳಿ ಬಂದೂಕು ಇತ್ತು. ತಮ್ಮ ಮೇಲೆ ನುಗ್ಗಿ ರಾಡ್ನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಛಾಪ್ರಾ ಸ್ಥಾನದಿಂದ ನಿಂತಿದ್ದ ಬಿಜೆಪಿಯ ಸೈಕತ್ ಸರ್ಕಾರ್, ತೃಣಮೂಲ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹೌರಾದಲ್ಲಿ ಇವಿಎಂಗಳು ಅಥವಾ ಎಲೆಕ್ಟ್ರಾನಿಕ್ ಮತ ಯಂತ್ರಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯನ್ನು (ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬುದು ಸ್ಪಷ್ಟವಾಗಿಲ್ಲ) ಅರೆಸೈನಿಕ ಸಿಬ್ಬಂದಿ ಎಳೆದೊಯ್ದಿದ್ದಾರೆ ಮತ್ತು ಒಬ್ಬ ಪೊಲೀಸ್ ಒಬ್ಬ ಕೈ ಅಥವಾ ಕಾಲು ಹಿಡಿದಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.
ಘರ್ಷಣೆಗೆ ಕಾರಣ
ಇವಿಎಂಗಳು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ದೀರ್ಘಕಾಲದ ಘರ್ಷಣೆಗೆ ಕಾರಣವಾಗಿದೆ, ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ- ಟಿಎಂಸಿ ನಡುವೆ ಆರೋಪ- ಪ್ರತ್ಯಾರೋಪಗಳು ನಡೆದಿವೆ.
ಏತನ್ಮಧ್ಯೆ, ಶಾಂತಿಪುರದಿಂದ ಆಸ್ತಿಪಾಸ್ತಿಗೆ ಹಾನಿ ವರದಿಯಾಗಿದೆ. ಸ್ಥಳೀಯ ಬಿಜೆಪಿ ಶಿಬಿರದಲ್ಲಿನ ಪೀಠೋಪಕರಣಗಳು ಒಡೆದು ಆ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ದಕ್ಷಿಣ ೨೪ ಪರಗಣ ಜಿಲ್ಲೆಯ ಭಂಗಾರ್ನಲ್ಲಿ, ಎಡರಂಗದ ಹೊಸ ಸಂಘಟನೆಯಾದ ಭಾರತೀಯ ಜಾತ್ಯತೀತ ರಂಗದ ಮತಗಟ್ಟೆ ಏಜೆಂಟ್ರನ್ನು ಮತದಾನ ಕೇಂದ್ರಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.
ಕೇಂದ್ರ ಪಡೆಗಳ ಮೇಲೆ ಮಮತಾ ಆರೋಪ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ – ಭಾರತೀಯ ಜನತಾ ಪಕ್ಷದೊಂದಿಗೆ ತೀವ್ರ ದ್ವಿಪಕ್ಷೀಯ ಹೋರಾಟಕ್ಕೆ ಕಾರಣವಾಗಿದ್ದು ಕೇಂದ್ರ ಭದ್ರತಾ ಪಡೆಗಳು “ಬಿಜೆಪಿಯ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿವೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ಕೇಂದ್ರ ಪಡೆಗಳು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಮತದಾನವನ್ನು ಈ ರೀತಿ ಮಾಡಲು ಸಾಧ್ಯವಿಲ್ಲ” ಹೊರಗಿನಿಂದ ‘ವೀಕ್ಷಕರನ್ನು’ ಬಿಜೆಪಿ ಕರೆ ತಂದಿದೆ ಎಂದು ಗಂಭೀರ ಆರೋಪ ಮಾಡಿದ್ದು ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ದಾಖಲೆ ಮತದಾನಕ್ಕೆ ಮೋದಿ ಕರೆ
ಪಶ್ಚಿಮ ಬಂಗಾಳ ವಿಧಾನಸಭೆಗೆ ಎರಡನೇ ಹಂತದ ಮತದಾನ ನಡೆದಿದ್ದು ಮತದಾನ ನಡೆಯುವ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲೆಯ ಮತದಾನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಜನರಿಗೆ ಕರೆ ನೀಡಿದ್ದಾರೆ.
ಚುನವಾಣೆ ಪಶ್ಚಿಮ ಬಂಗಾಳದ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಮತ ಚಲಾಯಿಸುವ ಎಲ್ಲರೂ ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ರೋಮಾಂಚಕ ಮತ್ತು ಭಾಗವಹಿಸುವಂತೆ ಮಾಡಿ ಎಂದಿದ್ದಾರೆ.
ಅದರಲ್ಲಿಯೂ ವಿಶೇಷವಾಗಿ ಪಶ್ಚಿಮ ಬಂಗಾಳದ ಮಹಿಳೆಯರು ಮತ್ತು ಯುವಕರು, ವಿಶೇಷವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುವುದು ಮುಖ್ಯ ಇದರಿಂದ ರಾಜ್ಯದ ಅಭಿವೃದ್ದಿಗೆ ಪೂರಕವಾದವರನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಹಲವು ಮತಗಟ್ಟೆಗಳಲ್ಲಿ ಕಮಲದ ಬಟನ್ ಮೇಲೆ ಟೇಪ್
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನದ ಸಂದರ್ಭದಲ್ಲಿ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಫಾಲ್ಟಾ ವಿಧಾನಸಭಾ ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಕಮಲದ ಬಟನ್ ಮೇಲೆ ಟೆಪ್ ಹಚ್ಚಿ ಮುಚ್ಚಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಫಾಲ್ಟಾದ ಹಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರದ ಮೇಲಿರುವ ಬಿಜೆಪಿಯ ಕಮಲ ಚಿನ್ಹೆಯ ಬಟನ್ನನ್ನು ಟೆಪ್ನಿಂದ ಮುಚ್ಚಲಾಗಿದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿಡಿಯೋ ಸಹಿತ ಆರೋಪಿಸಿದ್ದಾರೆ. ಈ ಕುತಂತ್ರವನ್ನು ‘ಡೈಮಂಡ್ ಹಾರ್ಬರ್’ ಮಾಡಲ್ ಎಂದು ಕರೆದಿರುವ ಅವರು ಬಿಜೆಪಿಗೆ ಮತ ಹಾಕದಂತೆ ಟಿಎಂಸಿ ಕಾರ್ಯಕರ್ತರು ಇಂತಹ ಕೃತ್ಯಎಸೆಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಯಾವ ಮತಗಟ್ಟೆಯಲ್ಲಿ ಟೇಪ್ ನಿಂದ ಮುಚ್ಚಾಲಾಗಿದೆಯೋ ಆ ಎಲ್ಲ ಮತಗಟ್ಟೆಗಳಲ್ಲಿ ಕೂಡಲೆ ಮರು ಮತದಾನ ನಡೆಸಬೇಕೆಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಈ ಆರೋಪಗಳು ನಿಜವೆಂದು ಸಾಬೀತಾದರೆ ಅಂತಹ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.























