Home ಜಿಲ್ಲೆ ಕಲಬುರಗಿ ಹಾಜಿ ಸರವರ ಉರುಸ್ ಧಾರ್ಮಿಕ ಭಾವೈಕತೆಗೆ ಸಾಕ್ಷಿಯಾದ ಹಿಂದೂ-ಮುಸ್ಲಿಂ ಬಾಂಧವ್ಯ

ಹಾಜಿ ಸರವರ ಉರುಸ್ ಧಾರ್ಮಿಕ ಭಾವೈಕತೆಗೆ ಸಾಕ್ಷಿಯಾದ ಹಿಂದೂ-ಮುಸ್ಲಿಂ ಬಾಂಧವ್ಯ

ಚಿಂಚೋಳಿ:ಏ.27:ತಾಲ್ಲೂಕಿನ ಗಡಿಕೇಶ್ವಾ ಗ್ರಾಮದ ಹಾಜಿ ಸರವರ್ ಉರುಸ್ ಸಡಗರ ಸಂಭ್ರಮದಿಂದ ಶನಿವಾರ ರಾತ್ರಿ ಜರುಗಿತು.

ಉರುಸ್ ಅಂಗವಾಗಿ ಬೆಳಿಗ್ಗೆಯಿಂದಲೇ ದರ್ಗಾಕ್ಕೆ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದವು. ಇದಕಿಂತ ಮುಂಚೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ‘ಸಂದಲ್’ ಮೆರವಣಿಗೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಪಾಲ್ಗೊಂಡು ಭಕ್ತಿ ಅರ್ಪಿಸಿದ್ದು ವಿಶೇಷವಾಗಿತ್ತು. ವಿವಿಧ ವಾದ್ಯಮೇಳಗಳು, ಭಜನೆ ಮತ್ತು ಕವಾಲಿ ಹಾಡುಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು

ಏ 25ರಂದು ರಾತ್ರಿ 9 ಗಂಟೆಗೆ ದೀಪೆÇೀತ್ಸವ, ಮಿಲಾದುನ್ನಬಿ ಹಾಗೂ ಖವಾಲಿ ಕಾರ್ಯಕ್ರಮಗಳು ಜರಗಿದ್ದವು. ದಿಫೆÇೀತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದುವು, ಏ. 26ರಂದು ಮುಂಜಾನೆ 6 ಗಂಟೆಗೆ ದೇವರ ಪ್ರಸಾದ ವಿತರಣೆ ನಡೆಯಲಿದೆ.ಏ27ರಂದು ಹರಿಜಾತ್ರೆ ಮೆರೆವಣಿಗೆ ಮುಖಾಂತರ ಪೂನಃ ಮಸ್ತಾನಲಿ ಅಬ್ದುಗನಿ ಪಟ್ಟೇದ್ದಾರ ಸಜ್ಜಾದ ನಷೀನ ಮುತ್ತವಲ್ಲಿ ಮನೆಗೆ ಮರಳಿ ದೇವರನ್ನು ತರುವದೊಂದಿಗೆ ಜಾತ್ರೆ ಮುಕ್ತಾಯಗೋಳ್ಳತ್ತದೆ ಎಂದು ಸಜ್ಜಾದ ನಷೀನ ಮುತ್ತವಲ್ಲಿ ಮಸ್ತಾನ ಅಲಿ ಪಟ್ಟೇದ್ದಾರ ಹೇಳಿಸಿದರು ಸುತ್ತಮುತ್ತಲಿನ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಹಜರತ್ ಹಾಜಿ ಸರವರ ದರ್ಶನ ಪಡೆದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದರ್ಗಾಕ್ಕೆ ಹೊದಿಕೆ (ಚಾದರ್) ಅರ್ಪಿಸಿ, ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರು ಈ ಸಮದರ್ಭದಲ್ಲಿ ಚಿಂಚೋಳಿ ಬಡಿ ದರ್ಗಾ ಸಾಹೇಬ್ ಅಕ್ಬರ್ ಹುಸ್ಸೇನಿ, ಸಜ್ಜಾದ ನಶೀನ ಮುತ್ತವಲ್ಲಿ ಮಸ್ತಾನ ಅಲಿ ಪಟ್ಟೇದ್ದಾರ ಜಹಿರೋದ್ದಿನ ಪಟೇಲ,ರಾಹತ ಅಲಿ ಇನಾಂದಾರ, ಜೀಶಾನ ಅಲಿ ಪಟ್ಟೆದಾರ, ಹಫೀಜ್ ರಫೀಕ್ ನೀಡಗುಂದಾ, ಆಲಿಮ್ ರೀಜ್ವಾನ, ಅಹ್ಮದ ಮೋಮಿನ , ಅಹ್ಮದ ಖಾನ , ಸದ್ದಾಂ ಹೊಸಳ್ಳಿ, ಶಬ್ಬಿರ ಮಿಯ್ಯ ಕೋಡ್ಲಿ, ರಿಯಾಜ ಕೋಡ್ಲಿ , ಮಾಜೀದ ಇನಾಂದಾರ, ಹಾಜಿಬಾಬಾ, ಅಕ್ರಮ ಇನಾಂದಾರ, ಅಕ್ಬರ ಮಿಯ್ಯ, ಅಕ್ರಮ ಪಟೇಲ, ಮಹೆಬೂಬ ಸಾಬ, ಯಾಸೀನ ಅಣಕಲ್, ನಬಿ ಪಟೇಲ, ಉಸ್ಮಾನ ಇನಾಂದಾರ ಇತರರು ಇದ್ದರು