Home ಜಿಲ್ಲೆ ಕಲಬುರಗಿ ಕೃಷಿ ಹೊಂಡದಲ್ಲಿ ಬಿದ್ದು ಕಾರ್ಮಿಕ ಸಾವು

ಕೃಷಿ ಹೊಂಡದಲ್ಲಿ ಬಿದ್ದು ಕಾರ್ಮಿಕ ಸಾವು

ಕರಜಗಿ:ಏ.27:ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನೀರು ತರಲೆಂದು ಕೃಷಿ ಹೊಂಡಕ್ಕೆ ಹೋದಾಗ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟಿರುವ ದುರ್ಘಟನೆ ಮಾಶಾಳ ಗ್ರಾಮದಲ್ಲಿ ಸಂಭವಿಸಿದೆ.ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಕೂಲಿ ಕಾರ್ಮಿಕ ಮೈಹಿಬೂಬ ದೀವಟಗಿ(42) ಮೃತ ಪಟ್ಟಿರುವ ದುರ್ದೈವಿ.ಶುಕ್ರವಾರ ಗ್ರಾಮದ ಅರವಿಂದ್ ಎನ್ನುವವರ ತೋಟಕ್ಕೆ ಕೂಲಿ ಕೆಲಸಕ್ಕೆ ಎಂದು ಹೋದಾಗ ಮಧ್ಯಾಹ್ನ 1 ಗಂಟೆಗೆ ನೀರು ತರಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.ಈ ಬಗ್ಗೆ ಅಫಜಲಪುರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.