
ಕೋಲಾರ ಏ.೨೭- ಪ್ರತಿದಿನದ ನಿರಂತರ ಅಭ್ಯಾಸ, ಶಿಕ್ಷಕರ ಸಲಹೆ, ಪೋಷಕರ ಸಹಕಾರದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯದ ಎರಡನೇ ಟಾಪರ್ ಎಂಬ ಹೆಗ್ಗಳಿಕೆಯ ಜೊತೆಗೆ ಜಿಲ್ಲೆಯ ಮೊದಲ ಟಾಪರ್ ಎಂಬ ಗೌರವ ತನ್ನದಾಗಿಸಿಕೊಂಡಿರುವ ಚಿನ್ಮಯ ಶಾಲೆಯ ವಿದ್ಯಾರ್ಥಿನಿ ಲಕ್ಷೀ ಮುಂದೆ ವೈದ್ಯರಾಗಿ ಸೇವೆ ಸಲ್ಲಿಸುವ ಆಶಯವನ್ನು ಹೊಂದಿರುವುದಾಗಿ ತಿಳಿಸಿದರು.
ನಗರದ ತಮ್ಮ ನಿವಾಸಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮನ್ವಯ ಸಮಿತಿ ನೇತೃತ್ವದ ಪದಾಧಿಕಾರಿಗಳು ತಮಗೆ ನೀಡಿದ ಆತ್ಮೀಯ ಗೌರವ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನ ವಹಿಸುವ ಶಿಕ್ಷಕರು, ಶಾಲೆಯ ಮುಖ್ಯಸ್ಥರಿಂದ ಈ ರೀತಿ ಗೌರವ ಸಂಪಾದಿಸಲು ಸಾಧ್ಯವಾಗಿದ್ದು ಅವರ ಶ್ರಮವನ್ನು ನಾನು ಮುಕ್ತ ಕಂಡದಿಂದ ಅಭಿನಂದಿಸುತ್ತೇನೆ ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಎನ್. ಮುನಿರಾಜು ಮಾತನಾಡಿ ವಿದ್ಯಾಭ್ಯಾಸಕ್ಕೆ ಜಾತಿ ಮುಖ್ಯವಲ್ಲ. ಸತತ ಪರಿಶ್ರಮ ಆಸಕ್ತಿ ಕಲಿಯುವ ಛಲ ಮುಖ್ಯ. ಇಂತಹ ವಿದ್ಯಾರ್ಥಿಗಳಿಂದ ಜಿಲ್ಲೆ ಶಿಕ್ಷಣ ರಂಗದಲ್ಲೂ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀvಪಡಿಸಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಿ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಅಶ್ವಿನ್, ಅಶೋಕ್ ಕಾರ್ಯದರ್ಶಿ ಬಿ.ಕೃಷ್ಣ ಅರೋಗ್ಯ ಇಲಾಖೆ ಲೋಕೇಶ್ ಮತ್ತಿತರರು ಉಪಸ್ಥಿರಿದ್ದರು.





















