
ಜನುಮ ದಿನಕ್ಕೆ ಸರ್ಪ್ರೈಸ್ ಲುಕ್ ವೈರಲ್!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೊಸ ಸಿನಿಮಾದ “ರಾಕಾ” ಲುಕ್ ಅನಾವರಣವಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾದ ಈ ಫಸ್ಟ್ ಲುಕ್‌ನಲ್ಲಿ ಬನ್ನಿ ಅರ್ಧ ಮನುಷ್ಯ–ಅರ್ಧ ಮೃಗದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದ್ದಾರೆ.
ಪುಷ್ಪ ಸರಣಿ ಬಳಿಕ ಅಲ್ಲು ಅರ್ಜುನ್, ತಮಿಳು ನಿರ್ದೇಶಕ ಅಟ್ಲಿ ಜೊತೆ ಹೊಸ ಪ್ರಾಜೆಕ್ಟ್ ಕೈಗೊಂಡಿದ್ದು, ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಮೂಡಿದೆ. “ರಾಕಾ” ಲುಕ್ ಗಾಗಿ ದಿನಕ್ಕೆ 3–4 ಗಂಟೆಗಳಷ್ಟು ಶ್ರಮ ಪಟ್ಟಿದ್ದಾರೆ ಎನ್ನಲಾಗಿದ್ದು, ಪಾತ್ರದ ಮೇಲಿನ ಅವರ ಸಮರ್ಪಣೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಪೋಸ್ಟರ್‌ನಲ್ಲಿನ ಅಲ್ಲು ಅರ್ಜುನ್ ಸಿಗ್ನೇಚರ್ ಹ್ಯಾಂಡ್ ಗೆಸ್ಚರ್ ಕೂಡ ಟ್ರೆಂಡ್ ಆಗಿದ್ದು, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಐಪಿಎಲ್ ಪಂದ್ಯದಲ್ಲಿ ಅದನ್ನು ರೀಕ್ರಿಯೇಟ್ ಮಾಡಿ ಗಮನ ಸೆಳೆದಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಭಾರೀ ಬಜೆಟ್‌ನಲ್ಲಿ ಮೂಡಿ ಬರುತ್ತಿರುವ ಈ ಫ್ಯಾಂಟಸಿ ಚಿತ್ರಕ್ಕೆ ಹಾಲಿವುಡ್ ಗ್ರಾಫಿಕ್ಸ್ ತಂಡ ಸಹಕಾರ ನೀಡುತ್ತಿದೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವ “ರಾಕಾ” ಈಗಾಗಲೇ ಸಿನಿ ಪ್ರಿಯರಲ್ಲಿ ದೊಡ್ಡ ಮಟ್ಟದ ಕುತೂಹಲ ಹುಟ್ಟಿಸಿದೆ.






















