Home ಜಿಲ್ಲೆ ದೇಶಕ್ಕೆ ತನ್ನದೇ ಆದ ಕೊಡುಗೆ ಕೊಟ್ಟ ವ್ಯಕ್ತಿಗೆ ಅಂಬೇಡ್ಕರರು

ದೇಶಕ್ಕೆ ತನ್ನದೇ ಆದ ಕೊಡುಗೆ ಕೊಟ್ಟ ವ್ಯಕ್ತಿಗೆ ಅಂಬೇಡ್ಕರರು


ಚನ್ನಮ್ಮನ ಕಿತ್ತೂರು,ಏ.೧೫: ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಹಾಗೂ ಬಾಬು ಜಗಜೀವನ ರಾಮ್ ಅವರ ಜಯಂತಿ ಅದ್ದೂರಿಯಿಂದ ಜರುಗಿತು.
ಅಂಬೇಡ್ಕರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಅಧ್ಯಕ್ಷತೆ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡೆ ಲಕ್ಷಿö್ಮÃ ಇನಾಮದಾರ ಆಗಮಿಸಿ ಮಾತನಾಡಿದರು.


ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಸಂದೀಪ ದೇಶಪಾಡೆ, ಸಿದ್ದನಗೌಡ ಪಾಟೀಲ, ಶಿವಾನಂದ ಹನಮಸಾಗರ ಸೇರಿದಂತೆ ಹಲವರು ಮಾತನಾಡಿದರು. ಈ ವೇಳೆ ಗ್ರಾಪಂ ಮಾಜಿ ಸದಸ್ಯ ಮಲ್ಲೇಶ ಚುಳಕಿ, ರಾಜೇಂದ್ರ ಇನಾಮದಾರ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಮಾತನವರ, ರುದ್ರಪ್ಪ ಲಿಂಗಮೇತ್ರಿ, ಫಕ್ಕೀರ ಜಾಗಂಟಿ, ಅಜ್ಜಪ್ಪ ನೇಗಿನಹಾಳ, ರಾಜಶೇಖರ ನಡವಿನಮನಿ, ಮಹಾದೇವ ಹತ್ತಿ, ಶಂಕರ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಸಮಾಜದ ಮುಖಂಡರು, ಸಾರ್ವಜನಿಕರಿದ್ದರು.