Home ಮುಖಪುಟ ಸುದ್ದಿ ಭೈರವೈಕ್ಯ ಮಂದಿರ ಲೋಕಾರ್ಪಣೆ

ಭೈರವೈಕ್ಯ ಮಂದಿರ ಲೋಕಾರ್ಪಣೆ

ಮೋದಿಯಿಂದ ಶ್ರೀಗಳ ಗುಣಗಾನ

ಮಂಡ್ಯ, ಏ. ೧೫- ಆದಿಚುಂಚನಗಿರಿ ಮಠವು ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ. ನಿರ್ಮಲಾನಂದನಾಥ ಸ್ವಾಮೀಜಿ ಮಠದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅನ್ನ ಅಕ್ಷರ, ಆರೋಗ್ಯ ಆಧ್ಯಾತ್ಮ ಸೇರಿದಂತೆ ೯ ತತ್ವ ಸಿದ್ದಾಂತವನ್ನು ಭಕ್ತರಿಗೆ ಮಠವು ಉಣಬಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆದಿಚುಂಚನಗಿರಿ ಮಠಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಸಮಾಜಕ್ಕೆ ಆದಿಚುಂಚನಗಿರಿ ಮಠ ಸೇವೆ ಅಪಾರ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಶ್ರೀಮಠವು ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಮಠ ಸೇವೆ, ಕಾರ್ಯ ಸದಾ ಜೀವಂತ.

ಸಾಮಾನ್ಯ ಜನರ ಜೀವನ ಬಗ್ಗೆ ಬಾಲಗಂಗಾಧರನಾಥ ಶ್ರೀಗಳಿಗೆ ಅರಿವಿತ್ತು. ಶಾಲೆಯಿಂದ ಹಿಡಿದು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ನೂರಾರು ಸಂಸ್ಥೆಗಳನ್ನ ಕಟ್ಟಿದರು. ನಮ್ಮ ಸರ್ಕಾರವೂ ಕೂಡ ಅದೇ ಆಶಯವನ್ನು ಹೊಂದಿ ಕೆಲಸ ಮಾಡುತ್ತಿದೆ ಬಾಲಗಂಗಾಧರನಾಥ ಶ್ರೀಗಳು ಕರುಣೆಯ ಪ್ರತಿರೂಪವಾಗಿದ್ದರು ಶ್ರೀಗಳಲ್ಲಿ ಬಹುದೊಡ್ಡ ಆಧ್ಯಾತ್ಮಿಕ ಶಕ್ತಿ ಇತ್ತು ಎಂದು ನುಡಿದರು. ಜನರ ಜೀವನ ಉತ್ತಮಗೊಳಿಸಲು ನಿರ್ಮಲಾನಂದನಾಥ ಶ್ರೀಗಳು ಶ್ರಮಿಸಿದ್ದಾರೆ. ಕೋಟ್ಯಾಂತರ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಗುರುಗಳಂತೆ ನಿರ್ಮಲಾನಂದನಾಥ ಶ್ರೀಗಳು ಮುನ್ನಡೆಯುತ್ತಿದ್ದಾರೆ. ಮಠವು ಅನ್ನ ಅಕ್ಷರ ಆರೋಗ್ಯ ಅಧ್ಯಾತ್ಮ ಸೇರಿದಂತೆ ೯ ತತ್ವ ಸಿದ್ದಾಂತವನ್ನ ಭಕ್ತರಿಗೆ ಉಣಬಡಿಸುತ್ತಿದೆ ಎಂದು ಗುಣಗಾನ ಮಾಡಿದರು.


ಅರಣ್ಯ ಸಂರಕ್ಷಣೆ ಸ್ವಚ್ಚತಾ ಕಾರ್ಯ ನಮ್ಮೆಲ್ಲರ ಕರ್ತವ್ಯಮಂಡ್ಯ ನೀರಿನ ಮಹತ್ವವನ್ನು ಹೊಂದಿದೆ ಇಡೀ ಪ್ರದೇಶ ಕಾವೇರಿ ಮಾತೆಯ ಆಶೀರ್ವಾದದಿಂದ ಫಲವತ್ತಾಗಿದೆ ನಾವೆಲ್ಲರೂ ನೀರಿನ ಉಳಿಸುವ ಸರಿಯಾಗಿ ಬಳಕೆ ಮಾಡುವ ಪ್ರತಿಜ್ಞೆ ಮಾಡೋಣ. ತಾಯಿಯ ಹೆಸರಲ್ಲಿ ಒಂದು ಗಿಡ ನೆಡೋಣ. ಅರಣ್ಯ ಸಂರಕ್ಷಣೆ ಸ್ವಚ್ಚತಾ ಕಾರ್ಯ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು


ಸ್ವದೇಶಿ ಆಹಾರ ಬಳಸಿಎಣ್ಣೆ ಪದಾರ್ಥ ಸೇವನೆ ಕಡಿಮೆ ಮಾಡಿ, ಆರೋಗ್ಯ ಕಾಳಜಿ ವಹಿಸಿ. ವಿದೇಶಿ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ, ದೇಶಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ. ಸ್ವದೇಶಿ ಆಹಾರದ ಕಡೆಗೆ ಗಮನಕೊಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಠದ ನಿರ್ಮಲಾನಂದನಾಥಸ್ವಾಮೀಜಿ, ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದರು.