Home ಜಿಲ್ಲೆ ಮಹಾ ಮಾನವತವಾದಿಗಳು:ಲಿಂಗಾರೆಡ್ಡಿ ನಾಯಕ

ಮಹಾ ಮಾನವತವಾದಿಗಳು:ಲಿಂಗಾರೆಡ್ಡಿ ನಾಯಕ

ಸೈದಾಪುರ:ಏ.೧೫:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರು ಮೊದಲ ಕಾನೂನು ಮಂತ್ರಿಯಾಗಿ, ಆರ್ಥಿಕ ತಜ್ಞರಾಗಿ ಏನನ್ನು ಬಯಸದೆ ದೇಶಕ್ಕಾಗಿ ದುಡಿದ ಮಹಾ ಮಾನವತವಾದಿಗಳಾಗಿದ್ದಾರೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳಿಂದ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಡತನದಲ್ಲಿ ಅರಳಿ ಆರ್ಥಿಕ ಸಮಾನತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಅವರ ಚಿಂತನೆ ದೇಶಕ್ಕೆ ಮಾದರಿಯಾಗಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲರುಗಳಾದ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ರಾಜಶೇಖರ ಪಾಟೀಲ, ಆನಂದ ಪಾಟೀಲ, ಸಂಗಾರೆಡ್ಡಿ ಪಾಟೀಲ, ಹೊನ್ನಪ್ಪ, ತೋಟೇಂದ್ರ, ನಿಜಗುಣಚಾರ್ಯ, ಅಭಿಷೇಕ, ಮಧು ಸೇರಿದಂತೆ ಇತರರಿದ್ದರು.